ಮಾಜಿ ಪ್ರಧಾನಿ ದೇವೇಗೌಡರ ಅತ್ತೆ ನಿಧನ

ಮಾಜಿ ಪ್ರಧಾನಿ ದೇವೇಗೌಡರ ಅತ್ತೆ ನಿಧನ

256
0
SHARE

ಚಿಕ್ಕಮಗಳೂರು(ಜ.4.2018):ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅತ್ತೆ, ದೇವೇಗೌಡರ ಪತ್ನಿ ಚೆನ್ನಮ್ಮ ಅವರ ತಾಯಿ ಕಾಳಮ್ಮ(100) ನಿಧನರಾದರು.

ಈ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾ ಪೀಠದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಿಂದ ದೇವೇಗೌಡರ ಕುಟುಂಬ ವಾಪಸಾಗಿದೆ. ಅತಿರುದ್ರ ಮಹಾಯಾಗದ ಎರಡನೇ ದಿನದ ಪೂಜೆಯಲ್ಲಿ ದೇವೇಗೌಡ, ಚೆನ್ನಮ್ಮ ಮತ್ತು ಕುಟುಂಬ ಭಾಗವಹಿಸಿತ್ತು. ಈ ಅತಿರುದ್ರ ಮಹಾಯಾಗ
12 ದಿನ ನಡೆಯಬೇಕಿತ್ತು.

ಕಾಳಮ್ಮಅವರು ಅನಾರೋಗ್ಯದಿಂದ ಇತ್ತೀಚೆಗೆ ಆಸ್ಪತ್ರೆ ಸೇರಿದ್ದು, ಬಳಿಕ ಹಾಸನದ ಮನೆಯಲ್ಲಿದ್ದರು. ಹೊಳೆನರಸೀಪುರ ತಾಲೂಕಿನ ಮುತ್ತಿಗೆ ಹಿರಿಯಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ದೇವೇಗೌಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವರು.

NO COMMENTS

LEAVE A REPLY