ಹಕ್ಕಿ ಜ್ವರ ಸೋಂಕು: ಹೆಚ್ಚಿನ ಸುರಕ್ಷತೆಗೆ ವಿಶೇಷ ತಂಡ ರಚನೆ

ಹಕ್ಕಿ ಜ್ವರ ಸೋಂಕು: ಹೆಚ್ಚಿನ ಸುರಕ್ಷತೆಗೆ ವಿಶೇಷ ತಂಡ ರಚನೆ

215
0
SHARE

ಬೆಂಗಳೂರು (ಜ.4.2018): ರಾಜ್ಯದಲ್ಲಿ ಹಕ್ಕಿ ಜ್ವರದ ಸೋಂಕು ಕಾಣಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಖಚಿತ ಪಟ್ಟಿದ್ದು ಸುರಕ್ಷತಾ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ. ಈ ಸಂಬಂಧ ತಪಾಸಣೆ ನಡೆಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಬೆಂಗಳೂರು ನಗರದಲ್ಲಿನ ನಾಟಿ ಕೋಳಿಯಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾದದ್ದರಿಂದ ತಕ್ಷಣವೇ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ತಂಡದಲ್ಲಿ ಪಶು ಸಂಗೋಪನೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಇರುತ್ತಾರೆ. ಈ ತಂಡದ ಮೂಲಕ ಕ್ಷಿಪ್ರಗತಿಯ ತಪಾಸಣೆ ನಡೆಯಲಿದೆ. ಜತೆಗೆ ಇದೇ ವಿಚಾರವಾಗಿ ಕೇಂದ್ರದ ಉನ್ನತಾಧಿಕಾರಿಗಳ ತಂಡವೂ ರಾಜ್ಯಕ್ಕೆ ಗುರುವಾರ ಭೇಟಿ ನೀಡಲಿದೆ.

ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಠ್‌ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಈ ವಿಚಾರವಾಗಿ ಬುಧವಾರ ತುರ್ತು ಸಭೆ ನಡೆಸಲಾಯಿತು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪಶು ಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಾಜ್‌ಕುಮಾರ್‌ ಖತ್ರಿ, ಹಕ್ಕಿ ಜ್ವರ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮದ ಮಾಹಿತಿ ಒದಗಿಸಿದರು.

NO COMMENTS

LEAVE A REPLY