ಕನ್ನಡ ಪತ್ರಕರ್ತನಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್

ಕನ್ನಡ ಪತ್ರಕರ್ತನಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್

199
0
SHARE

ಚೆನ್ನೈ(ಜ.2.2018): ರಾಜಕೀಯಕ್ಕೆ ಧುಮುಕಿರುವ ಸೂಪರ್ ಸ್ಟಾರ್ ತಲೈವಾ ಕರ್ನಾಟಕದಲ್ಲಿ ತಮ್ಮ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

10ನೇ ತರಗತಿಯಲ್ಲಿ ಫೇಲ್ ಆದ ಬಳಿಕ ಕನ್ನಡ ಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿದ್ದೆ. ನಾನು ಮೊದಲ ಸಂದರ್ಶನ ಕೊಟ್ಟಿದ್ದು ಬೊಮ್ಮಾಯಿ ಪತ್ರಿಕೆಗೆ ಆನಂತರ  ಕಂಡಕ್ಟರ್ ಆದ ಮೇಲೆ ಸಿನಿಮಾ ರಂಗ ಸೆಳೆಯಿತು. ಅಲ್ಲಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದೇನೆ ಎಂದು ರಜನಿ ತಮ್ಮ ಗತ ವೈಭವದ ದಿನ ಮೆಲುಕು ಹಾಕಿದರು.

ಹಾಗೆಯೇ ಮೊದಲ ರಾಜಕೀಯ ಸಂದೇಶ ನೀಡಿರುವ ರಜನಿಕಾಂತ್, ನಾನು ತಮಿಳುನಾಡು ರಾಜಕೀಯದಲ್ಲಿ ಕ್ರಾಂತಿ ಬಯಸಿದ್ದೇನೆ. ಈಗ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದರೆ ಭವಿಷ್ಯದ ಜನಾಂಗಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.

ಪ್ರಮುಖ ರಾಜಕೀಯ ಘಟನಾವಳಿಗಳಿಗೆ ತಮಿಳುನಾಡು ಐತಿಹಾಸಿಕ ಸ್ಥಳವಾಗಿದೆ. ಮಹಾತ್ಮ ಗಾಂಧಿ ತಮ್ಮ ವಸ್ತ್ರ ತ್ಯಜಿಸಿದ್ದು ಇಲ್ಲೇ. ಅದೇ ರೀತಿ ನಾನೂ ಕ್ರಾಂತಿ ಬಯಸಿದ್ದೇನೆ ಎಂದು ರಜನಿಕಾಂತ್ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.

NO COMMENTS

LEAVE A REPLY