ಕೋರೆಗಾಂವ್ ವಿಜಯೋತ್ಸವದಲ್ಲಿ ದೌರ್ಜನ್ಯ: ಮಾನಸ ಗಂಗೋತ್ರಿಯಲ್ಲಿ ಪ್ರತಿಭಟನೆ

ಕೋರೆಗಾಂವ್ ವಿಜಯೋತ್ಸವದಲ್ಲಿ ದೌರ್ಜನ್ಯ: ಮಾನಸ ಗಂಗೋತ್ರಿಯಲ್ಲಿ ಪ್ರತಿಭಟನೆ

195
0
SHARE

ಮೈಸೂರು(ಜ.3.2018):ಕೋರೆಗಾಂವ್ ವಿಜಯೋತ್ಸವ 200ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ಪುಣೆಯ ಸಮೀಪ ನಡೆದ ದೌರ್ಜನ್ಯವನ್ನ ವಿರೋಧಿಸಿ ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ವಿದ್ಯಾರ್ಥಿಗಳು ಮೌನಮೆರವಣಿಗೆ ಮಾಡುವ ಮುಖಾಂತರ ಪ್ರತಿಭಟನೆ ನಡೆಸಿದರು.

ಸಂಶೋಧನ ವಿದ್ಯಾರ್ಥಿಗಳು, ಬಿವಿಎಸ್ ಸಂಘಟನೆ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಲಾಯಿತು. ಪುಣೆಯ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿರುವ ದಲಿತರ ಮೇಲೆ ಕೇಸರಿ ಭಾವುಟ ಹಿಡಿದ ಕ್ರೂರಿಗಳು ಕಲ್ಲುತೂರಾಟ ನಡೆಸಿದ್ದು, ದಲಿತರನ್ನು ಆಕ್ರೋಶಕ್ಕೀಡು ಮಾಡಿದೆ. ಈಗಾಗಲೇ ದೇಶದಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಮುಂದುವರಿದ ಭಾಗ ಇದಾಗಿದೆ. ಈ ಆಚರಣೆ ಮನುವಾದಿ ಮನಸ್ಥಿತಿಗಳಿಗೆ ನುಂಗಲಾರದ ತುತ್ತಾಗಿದೆ ಎನ್ನುವುದನ್ನು ಇದು ಸಾಬೀತು ಪಡಿಸಿದೆ. ಇಂತಹ ಆಚರಣೆಗಳ ಮೂಲಕ ಇತಿಹಾಸದ ವಾಸ್ತವಗಳನ್ನು ತೆರೆದಿಡುವುದು ಮತ್ತು ದಲಿತರನ್ನು ಜಾಗೃತರನ್ನಾಗಿಸುತ್ತಿರುವುದು ಅವರಿಗೆ ಆತಂಕದ ವಿಷಯವಾಗಿದೆ ಎಂದು ಮನುಸಿದ್ದಾಂತಕ್ಕೆ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಧಿಕ್ಕಾರ ಹೇಳಲಾಯಿತು.
-ಬೆನಾಚಂ

NO COMMENTS

LEAVE A REPLY