ಮೈಸೂರಿನಲ್ಲಿ ಆಫ್ ಹೆಲ್ಮೇಟ್ ವಶಪಡಿಸಿಕೊಂಡ ಪೊಲೀಸರು: ಬೈಕ್ ಸವಾರರಿಂದ ಆಕ್ರೋಶ..

ಮೈಸೂರಿನಲ್ಲಿ ಆಫ್ ಹೆಲ್ಮೇಟ್ ವಶಪಡಿಸಿಕೊಂಡ ಪೊಲೀಸರು: ಬೈಕ್ ಸವಾರರಿಂದ ಆಕ್ರೋಶ..

381
0
SHARE

ಮೈಸೂರು(ಜ.2.2018):ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ಆಫ್ ಹೆಲ್ಮೇಟ್ ಧರಿಸಿ ಬಂದ ವಾಹನ ಸವಾರರಿಗೆ ಬಿಗ್ ಶಾಕ್ ಕಾದಿತ್ತು, ಪೊಲೀಸರು  ನಗರದಾದ್ಯಂತ ಆಫ್ ಹೆಲ್ಮೇಟ್ ಕಾರ್ಯಚರಣೆ ನಡೆಸಿ ನಿಷೇಧಿತ, ದೋಷ ಪೂರಿತ ಹೆಲ್ಮೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.

 

ಪೋಲಿಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು ಸೂಚನೆ ಮೇರೆಗೆ ನಗರದ ಎಲ್ಲಾ ಠಾಣೆಗಳ ವ್ಯಾಪ್ತಿಯ ಪೊಲೀಸರು ರಸ್ತೆಗಳಿದು ಆಫ್ ಹೆಲ್ಮೇಟ್ ಧರಿಸಿ ಬಂದ ವಾಹನ ಸವಾರರನ್ನು ತಡೆದು ಹೆಲ್ಮೆಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಸಾವಿರಾರು ಆಫ್ ಹೆಲ್ಮೇಟ್ ಗಳನ್ನು ಪೊಲೀಸರು ವಶಪಡೆದುಕೊಂಡಿದ್ದು, ಇಂದು ವಾಹನ ಸವಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಚರಣೆ ನಡೆಸಿದ್ದಾರೆ.

ಇನ್ನು ಮತ್ತೊಂದೆಡೆ ಅರ್ಧ ಹೆಲ್ಮೇಟ್ ಮಾರಟ ಮಾಡುತ್ತಿದ್ದ ಅಂಗಡಿ ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಾಳೆಯಿಂದ ಆಫ್ ಹೆಲ್ಮೇಟ್ ಧರಿಸಿ ವಾಹನ ಚಲಾಯಿಸದ್ರೆ ಫೈನ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ದಿಢೀರ್ ಕಾರ್ಯಚರಣೆಗೆ ಸಾರ್ವಜನಿಕರು ಗಾಬರಿಗೊಂಡರು. ಇನ್ನು ಕೆಲವು ಕಡೆ ಪೋಲಿಸರೊಂದಿಗೆ ಸಾರ್ವಜನಿಕರು ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆದಿದೆ. ಪೊಲೀಸರ ಈ ಕ್ರಮಕ್ಕೆ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ.ಇಷ್ಟು ದಿನ ಸುಮ್ಮನಿದ್ದು ಇವಾಗ ಏಕಾ ಏಕಿ ಹಾಫ್ ಹೆಲ್ಮೇಟ್ ಹಾಕ್ಬೇಡಿ ಎಂದ್ರೆ ಹೇಗೆ ? ಹಾಫ್ ಹೆಲ್ಮೇಟ್ ಮಾರಟ ಮಾಡೋ ಅಂಗಡಿಗಳನ್ನ ಮೊದಲು ಸೀಜ್ ಮಾಡಿ ಎಂದು ಬೈಕ್ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

NO COMMENTS

LEAVE A REPLY