ಹೊಸ ವರ್ಷದ ಆಚರಣೆ: ಮರುಕಳಿಸಿದ ಕಿಡಿಗೇಡಿಗಳ ಅಸಭ್ಯ ವರ್ತನೆ

ಹೊಸ ವರ್ಷದ ಆಚರಣೆ: ಮರುಕಳಿಸಿದ ಕಿಡಿಗೇಡಿಗಳ ಅಸಭ್ಯ ವರ್ತನೆ

180
0
SHARE

ಬೆಂಗಳೂರು(ಜ.1.2108):ಕಳೆದ ವರ್ಷ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಈ ಬಾರಿಯೂ ಮರುಕಳಿಸಿದೆ. ಸಾವಿರಾರು ಪೊಲೀಸರ ಭದ್ರತೆಯ ನಡುವೆಯೂ ಕಾಮುಕರು ಯುವತಿಯರೊಂದಿಗೆ ಅಸಭ್ಯವಾಗಿ ಅವ್ರ್ತಿಸಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ರಾತ್ರಿ ಹೊಸ ವರ್ಷದ ಸಂಭ್ರಮ ಮುಗಿದ ಮೇಲೆ 12 ಗಂಟೆಯ ನಂತರ ಬ್ರಿಗೇಡ್ ರಸ್ತೆಯಿಂದ ಎಲ್ಲರೂ ನಿರ್ಗಮಿಸಬೇಕಾದರೆ ಕಿಡಿಗೇಡಿಗಳು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಮಹಿಳೆಯೋರ್ವಳ ಜೊತೆ ಅಸಭ್ಯವಾಗಿ ವರ್ತಿಸಿದವನಿಗೆ ಸಾರ್ವಜನಿಕರೇ ಮನಬಂದಂತೆ ಥಳಿಸಿ, ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ಕಾಮುಕರ ತಂಡದವರು ಪತಿಯೊಂದಿಗಿದ್ದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸ ವರ್ಷದ ಸಂಭ್ರಮ ಮುಗಿಸಿ ತೆರಳುತ್ತಿದ್ದ ಯುವತಿಯರ ತಂಡವನ್ನು ಚುಡಾಯಿಸಲು ಯತ್ನಿಸಿದ ಯುವಕರ ಗುಂಪನ್ನು ಪೊಲೀಸರು ಲಾಠಿ ಪ್ರಹಾರ ನಡೆಸಿ ಚದುರಿಸಿದ್ದಾರೆ. ಇನ್ನು ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸದ 60 ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

NO COMMENTS

LEAVE A REPLY