ಇಯರ್ ಎಂಡ್ ಸಂಭ್ರಮಕ್ಕೆ ರಾತ್ರಿ 1ಗಂಟೆವರಗೆ ಅವಕಾಶ: ಡಾ.ಸುಬ್ರಹ್ಮಣ್ಣೇಶ್ವರ ರಾವ್

ಇಯರ್ ಎಂಡ್ ಸಂಭ್ರಮಕ್ಕೆ ರಾತ್ರಿ 1ಗಂಟೆವರಗೆ ಅವಕಾಶ: ಡಾ.ಸುಬ್ರಹ್ಮಣ್ಣೇಶ್ವರ ರಾವ್

151
0
SHARE

ಮೈಸೂರು(ಡಿ.31,2017):ಹೊಸ ವರ್ಷಾಚರಣೆಗೆ ಇನ್ನು ಒಂದು ಬಾಕಿ ಇದ್ದು, ಮಧ್ಯರಾತ್ರಿ 1 ಗಂಟೆವರೆಗೂ ಇಯರ್ ಎಂಡ್ ಸಂಭ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ ಸುಬ್ರಹ್ಮಣ್ಣೇಶ್ವರ ರಾವ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ ಸುಬ್ರಹ್ಮಣ್ಣೇಶ್ವರ ರಾವ್, ಮೈಸೂರು ಒಂದು ಪ್ರವಾಸಿ ತಾಣ. ಈ ಕಾರಣಕ್ಕೆ ವಿಶ್ವದಾದ್ಯಂತ ಸಾಕಷ್ಟು ಪ್ರವಾಸಿಗರು ಮೈಸೂರಿಗೆ ಬಂದಿದ್ದಾರೆ ಅವರ ರಕ್ಷಣೆ ನಮ್ಮ ಹೊಣೆ ಎಂದರು.

ಮಧ್ಯಸೇವನೆ ಮಾಡಿ ವಾಹನ ಚಲಾಯಿಸೋದು ಅಪರಾಧ. ಅಂತಹ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಲಾಗುತ್ತೆ, ಹಾಗೆ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ಮಹಿಳಾ ಪೊಲೀಸ್ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

NO COMMENTS

LEAVE A REPLY