ಸಂವಿಧಾನ ಬದಲಿಸುವ ಹೇಳಿಕೆ: ಹೆಗಡೆ ವಿರುದ್ಧ ಮಾನಸ ಗಂಗೋತ್ರಿಯಲ್ಲಿ ಪ್ರತಿಭಟನೆ

ಸಂವಿಧಾನ ಬದಲಿಸುವ ಹೇಳಿಕೆ: ಹೆಗಡೆ ವಿರುದ್ಧ ಮಾನಸ ಗಂಗೋತ್ರಿಯಲ್ಲಿ ಪ್ರತಿಭಟನೆ

254
0
SHARE

ಮೈಸೂರು(ಡಿ.29.2017):ಸಂವಿಧಾನ ಬದಲಾವಣೆ ಹೇಳಿಕೆ ನೀಡಿ ನಂತರ ಕ್ಷಮೆ ಯಾಚಿಸಿರುವ ಕೇಂದ್ರ ಸಚಿವ ಆನಂತ್ ಕುಮಾರ್ ಹೆಗಡೆ ವಿರುದ್ಧ ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ವಿದ್ಯಾರ್ಥಿ ಸಮೂಹವು ಹೆಗಡೆಯವರ ಪ್ರತಿಕೃತಿ ದಹನ ಮಾಡಿ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ಮಾಡಲಾಯಿತು.

ಜಾತ್ಯಾತೀತರಿಗೆ ತಂದೆ ತಾಯಿಗಳ ರಕ್ತದ ಪರಿಚಯವಿಲ್ಲ ಹಾಗೂ ಕೂಡಲೇ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದು ಜಾತ್ಯಾತೀತರ ಭಾವನೆಗೆ ಧಕ್ಕೆ ಉಂಟುಮಾಡುವಂತ ವಿವಾಧಾತ್ಮಕ ಹೇಳಿಕೆ ನೀಡಿರುವ, ಆನಂತ್ ಕುಮಾರ್ ಹೆಗಡೆಯವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ವಿದ್ಯಾರ್ಥಿ ಒಕ್ಕೂಟವು ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ಆಗ್ರಹಿಸಿದರು.

ಬಿಜೆಪಿ ಸರ್ಕಾರವು ಕೇವಲ ಜಾತ್ಯಾತೀತರನ್ನೇ ಕೇಂದ್ರೀಕರಿಸಿ ಇಂತಹ ಘಟನೆಗಳಿಗೆ ಪ್ರತ್ಯೇಕ್ಷ ಕಾರಣವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧವು ಸಹಾ ಧಿಕ್ಕಾರವನ್ನು ಕೂಗಿದರು.

                                 -ಬೆನಾಚಂ

NO COMMENTS

LEAVE A REPLY