ಸಿದ್ದರಾಮಯ್ಯ ಟಿಪ್ಪು ರಕ್ತ ಹಂಚಿಕೊಂಡು ಹುಟ್ಟಿರಬಹುದು: ಈಶ್ವರಪ್ಪ

ಸಿದ್ದರಾಮಯ್ಯ ಟಿಪ್ಪು ರಕ್ತ ಹಂಚಿಕೊಂಡು ಹುಟ್ಟಿರಬಹುದು: ಈಶ್ವರಪ್ಪ

233
0
SHARE

ಶಿವಮೊಗ್ಗ(ಡಿ.29.2017): ಉಡುಪಿಗೆ ಹೋಗಿಯೂ ಶ್ರೀಕೃಷ್ಣನ ದರ್ಶನ ಮಾಡದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್‌ ರಕ್ತವನ್ನು ಹಂಚಿಕೊಂಡು ಹುಟ್ಟಿರಬಹುದು ಎಂದು ಪ್ರತಿ ಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆಪಾದಿಸಿದರು. 

ತಾಲೂಕಿನ ಹರಮಘಟ್ಟದಲ್ಲಿ ಗುರುವಾರ ನಡೆದ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಪರಿವರ್ತನಾ ರ‍್ಯಾಲಿ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ದೇವರ ಮೇಲೆ ಭಕ್ತಿ ಬಂದಂತೆ ಕಾಣುತ್ತಿದೆ. ಆದರೆ, ಉಡುಪಿಗೆ ಭೇಟಿ ಕೊಟ್ಟ ಸಂದರ್ಭ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಲು ಆಗಲಿಲ್ಲ. ದರ್ಶನ ಮಾಡಿ ಎಂದು ಯಾರೂ ಆಹ್ವಾನಿಸಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಗೋಡೆ ಒಡೆದು ಕಿಂಡಿಯ ಮೂಲಕ ಭಕ್ತನಿಗೆ ದರ್ಶನ ನೀಡಿದ ಕನಕದಾಸರ ರಕ್ತವನ್ನು ಹಂಚಿಕೊಂಡು ನಾನು ಹುಟ್ಟಿದವನು. ಹಾಗಾದರೆ ಶ್ರೀ ಕೃಷ್ಣನ ದರ್ಶನ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಸುಲ್ತಾನ್‌ ರಕ್ತ ಹಂಚಿಕೊಂಡು ಹುಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

NO COMMENTS

LEAVE A REPLY