ಸಂವಿಧಾನ ಬದಲಿಸುವ ಹೇಳಿಕೆ: ಕ್ಷೇಮೆಯಾಚಿಸಿದ ಹೆಗಡೆ

ಸಂವಿಧಾನ ಬದಲಿಸುವ ಹೇಳಿಕೆ: ಕ್ಷೇಮೆಯಾಚಿಸಿದ ಹೆಗಡೆ

202
0
SHARE

ಹೊಸದಿಲ್ಲಿ(ಡಿ.28.2017): ಸಂವಿಧಾನ ತಿದ್ದುಪಡಿ ಮಾಡುವ ಕುರಿತ ತಮ್ಮ ಹೇಳಿಕೆಗೆ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ಅನಂತ್‍ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅವರು, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಹೇಳಿಕೆಯಿಂದ ಜನರ ಭಾವನೆಗಳಿಗೆ ನೋವುಂಟಾಗಿದ್ದರೆ ಆದಕ್ಕೆ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ.

ಸಂವಿಧಾನ, ಸಂಸತ್ತು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಅಪಾರ ಗೌರವವಿದೆ. ಸಂವಿಧಾನಕ್ಕೆ ಎಲ್ಲಕ್ಕಿಂತ ಶ್ರೇಷ್ಠ ಮತ್ತು ಯಾವ ನಾಗರಿಕರೂ ಅದರ ವಿರುದ್ಧ ಹೋಗಲಾರರು ಎಂದು ಅನಂತ್‍ಕುಮಾರ್ ಹೆಗಡೆ ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯರು ಸಂಸತ್ತಿನ ಹೊರಗೆ ಅನಂತ್ ಕುಮಾರ್ ಹೆಗಡೆ ಅವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಅನಂತ್ ಕುಮಾರ್ ಹೆಗಡೆ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಸಂಸತ್ ಭವನದ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

NO COMMENTS

LEAVE A REPLY