ರೂಪದರ್ಶಿ ಮೇಲೆ ಸಾಮೂಹಿಕ ಅತ್ಯಾಚಾರ

ರೂಪದರ್ಶಿ ಮೇಲೆ ಸಾಮೂಹಿಕ ಅತ್ಯಾಚಾರ

248
0
SHARE

ಹೊಸದಿಲ್ಲಿ(ಡಿ.28.2017): ಉದಯೋನ್ಮುಖ ರೂಪರ್ಶಿಯೊಬ್ಬರ (20) ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದಕ್ಷಿಣ ದಿಲ್ಲಿಯ ಆರ್ ಕೆ ಪುರಂನಲ್ಲಿ ನಡೆದಿದೆ. ಈ ಘಟನೆಗೆ ಕಾರಣರಾದ ಮೂವರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ರೋಮಿಲ್ ಬಾನಿಯಾ ತಿಳಿಸಿದ್ದಾರೆ.

ಅತ್ಯಾಚಾರ ಮಾಡಿದ ಆರೋಪಿಗಳಲ್ಲಿ ರೂಪದರ್ಶಿಯ ಗೆಳೆಯನೂ ಇದ್ದ. ಮುಂಬೈನ ಪಾರ್ಟಿಯೊಂದರಲ್ಲಿ ಪರಿಚಯವಾಗಿದ್ದ ಆತ ಮಾಡೆಲಿಂಗ್‌ ಕೆಲಸ ಕೊಡಿಸುವುದಾಗಿ ಮುಂಬೈನಿಂದ ದಿಲ್ಲಿಗೆ ಕರೆದುಕೊಂಡು ಬಂದಿದ್ದ. ದಿಲ್ಲಿಯಲ್ಲಿ ಸಿನಿಮಾ ನಿರ್ದೇಶಕರು, ಛಾಯಾಗ್ರಾಹಕರು ನನಗೆ ಗೊತ್ತು ಎಂದು ಹೇಳಿ ನಂಬಿಸಿ ಕರೆದೊಯ್ದಿದ್ದ. ಅಲ್ಲಿಂದ ತನ್ನ ಅಪಾರ್ಟ್‍ಮೆಂಟ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ವಸಂತ್ ಕುಂಜ್‌ನಲ್ಲಿರುವ ಮಾಲ್ ಒಂದಕ್ಕೆ ಕರೆದೊಯ್ದು ಗೆಳೆಯರ ಜತೆ ಅಲ್ಲೇ ಪಾರ್ಟಿ ಆಚರಿಸಿಕೊಂಡು ಬಳಿಕ ಅಪಾರ್ಟ್‍ಮೆಂಟ್‌ನಲ್ಲೂ ಪಾರ್ಟಿ ಮಾಡುವುದಾಗಿ ಹೇಳಿ ಕರೆದೊಯ್ದು ಅಲ್ಲೇ ಅತ್ಯಾಚಾರ ಎಸಗಿದ್ದಾಗಿ ರೂಪದರ್ಶಿ ತಿಳಿಸಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ಸೋಮವಾರ ರಾತ್ರಿ ಪೊಲೀಸರಿಗೆ ದೂರು ನೀಡಲಾಗಿದೆ. ರೂಪದರ್ಶಿ ಕೊಟ್ಟಿರುವ ಹೇಳಿಕೆಯನ್ನು ಪರಿಶೀಲನೆ ಮಾಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸರಕಾರೇತರ ಸಂಸ್ಥೆಯಲ್ಲಿ ಸಂತ್ರಸ್ತೆಗೆ ಆಪ್ತಸಲಹೆ ನೀಡಲಾಗಿದೆ.

NO COMMENTS

LEAVE A REPLY