ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 168.84 ಕೋಟಿ ರೂ. ಆದಾಯ

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 168.84 ಕೋಟಿ ರೂ. ಆದಾಯ

172
0
SHARE

ಶಬರಿಮಲೆ (ಡಿ.28.2017): ವಾರ್ಷಿಕ ಯಾತ್ರೆಯ ಮೊದಲ ಹಂತದ ಅವಧಿಯಲ್ಲಿ ಕೇರಳದ ಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 168.84 ಕೋಟಿ ರೂ.  ಹರಿದು ಬಂದಿದೆ.

ನ.15ರಿಂದ ಡಿ.25ರವರೆಗಿನ ಮೊದಲ ಹಂತದ ಯಾತ್ರೆಯಲ್ಲಿ ಇಷ್ಟೊಂದು ದೇಣಿಗೆ ಸಂಗ್ರಹವಾಗಿದೆ. ಡಿ. 26ರಂದು ಮೊದಲ ಹಂತದ ಯಾತ್ರೆ ಮುಗಿದಿದ್ದು, ಮಕರ ಸಂಕ್ರಾಂತಿ ಪ್ರಯುಕ್ತ ಡಿಸೆಂಬರ್ 30ರಂದು ಪುನಃ ತೆರೆಯಲಾಗುವ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಸಂಕ್ರಾಂತಿ ಹಬ್ಬವಾದ ಜ.14ರಂದು ಪೂಜೆ ಸಲ್ಲಿಕೆಯಾದ ಬಳಿಕ ಮತ್ತೆ ಮುಚ್ಚಲಾಗುತ್ತದೆ.

ಚಿತ್ರಾಗೆ ಹರಿವರಾಸನಂ ಪ್ರಶಸ್ತಿ: ಕೇರಳ ಸರ್ಕಾರ ನೀಡುವ ಪ್ರತಿಷ್ಠಿತ ‘ಹರಿವರಾಸನಂ’ ಪ್ರಶಸ್ತಿಗೆ ಹಿರಿಯ ಗಾಯಕಿ ಕೆ. ಎಸ್. ಚಿತ್ರಾ ಆಯ್ಕೆಯಾಗಿದ್ದಾರೆ.ಜ. 14ರಂದು ಶಬರಿಮಲೆಯ ಸನ್ನಿಧಾನದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಗಾಯಕಿಗೆ ಈ ಪುರಸ್ಕಾರ ನೀಡಲಾಗುತ್ತದೆ

NO COMMENTS

LEAVE A REPLY