ಕನ್ನಡ ಬಳಕೆ ಇಲ್ಲದಿದ್ದರೆ ವೆಬ್‌ಸೈಟ್‌ ಸ್ಥಗಿತ

ಕನ್ನಡ ಬಳಕೆ ಇಲ್ಲದಿದ್ದರೆ ವೆಬ್‌ಸೈಟ್‌ ಸ್ಥಗಿತ

202
0
SHARE

ಬೆಂಗಳೂರು(ಡಿ.28.2017): ಎಲ್ಲ ಸರಕಾರಿ ಮತ್ತು ಅರೆ ಸರಕಾರಿ ಕಚೇರಿಗಳ ಅಧಿಕೃತ ವೆಬ್‌ಸೈಟ್‌ಗಳು ಕನ್ನಡದಲ್ಲಿ ಕಡ್ಡಾಯವಾಗಿ ಮಾಹಿತಿ ನೀಡದಿದ್ದರೆ ಅಂತಹ ವೆಬ್‌ಸೈಟ್‌ ಸ್ಥಗಿತಗೊಳಿಸಲು ಇ-ಆಡಳಿತ ಇಲಾಖೆ ಮುಂದಾಗಿದೆ.

ಈ ಸಂಬಂಧ ಮೌಖಿಕ ಸೂಚನೆಯನ್ನು ಇಲಾಖೆ ಹಿರಿಯ ಅಧಿಕಾರಿಗಳು/ಮುಖ್ಯಸ್ಥರುಗಳಿಗೆ ರವಾನಿಸಿದೆ. ರಾಜ್ಯದಲ್ಲಿ ಸರಕಾರಿ ಅಧೀನದ ಬಹುತೇಕ ಕಚೇರಿಗಳ ವೆಬ್‌ಸೈಟ್‌ ಇಂಗ್ಲಿಷ್‌ ಮಯವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡದಲ್ಲಿಯೂ ಮಾಹಿತಿ ನೀಡಲು 15 ದಿನದ ಗಡುವು ನೀಡಿತ್ತು. ಈ ಆದೇಶಕ್ಕೆ ಯಾವ ಇಲಾಖೆಯೂ ಕವಡೆ ಕಾಸಿನ ಕಿಮ್ಮತ್ತು ನೀಡದ ಹಿನ್ನೆಲೆಯಲ್ಲಿ ಇ-ಆಡಳಿತ ಕ್ರಮಕ್ಕೆ ಮುಂದಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರು ಇತ್ತೀಚೆಗೆ ಇ-ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ ಅವರ ಜತೆ ಮಾತುಕತೆ ನಡೆಸಿದ್ದರು. ಎಲ್ಲಾ ಇಲಾಖೆಗಳ ವೆಬ್‌ಸೈಟ್‌ನ ಪ್ರಧಾನ ಭಾಷೆ ಕಡ್ಡಾಯವಾಗಿ ಕನ್ನಡ ಆಗಿರಬೇಕು ಎಂಬುದನ್ನು ಸೂಚಿಸಿದ್ದರು.

ಪ್ರಾಧಿಕಾರದ ಸಭೆ ವೇಳೆ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಕುರಿತು ಒಮ್ಮತದ ನಿರ್ಣಯವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಮೌಖಿಕ ಆದೇಶ ಹೊರಬಿದ್ದಿದ್ದು, ಶೀಘ್ರ ಲಿಖಿತ ಆದೇಶ ನಿಡಲಾಗುವುದು.

ಸಾಮಾನ್ಯರಿಗೆ ತಲುಪುವ ಉದ್ದೇಶ:
”ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕು. ಸರಕಾರಿ ಇಲಾಖೆಯ ವೆಬ್‌ಸೈಟ್‌ಗಳನ್ನು ಸಂಪರ್ಕಿಸಿದರೆ ವೆಬ್‌ಸೈಟ್‌ಗಳು ಇಂಗ್ಲಿಷ್‌ನಲ್ಲಿ ಇದ್ದು, ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. 2ನೇ ಹಾಗೂ ಆಯ್ಕೆ ಭಾಷೆಯಾಗಿ ಇಂಗ್ಲಿಷ್‌ ಆಗಿರಬೇಕು,” ಎಂಬುದು ಇದರ ಪ್ರಮುಖ ಉದ್ದೇಶವಾಗಿದೆ. ಇದು ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ಗ್ರಾ.ಪಂ.ವರೆಗೂ ಅನ್ವಯವಾಗಲಿದೆ. ಯಾರಿಗೂ, ಯಾವ ಇಲಾಖೆಗೂ ರಿಯಾಯಿತಿ ಇಲ್ಲ,” ಎನ್ನುತ್ತಾರೆ ಸಿದ್ದರಾಮಯ್ಯ

ಶೇ. 20 ಮಾತ್ರ ಬಳಕೆ:
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿರುವ ಅಧ್ಯಯನ ಹಾಗೂ ಲಭಿಸಿರುವ ಮಾಹಿತಿ ಪ್ರಕಾರ ಸರಕಾರದ ಅಧೀನದಲ್ಲಿರುವ ಶೇ. 20ರಷ್ಟು ಇಲಾಖೆಗಳು ಮಾತ್ರ ಕನ್ನಡವನ್ನು ತಮ್ಮ ವೆಬ್‌ಸೈಟ್‌ನ ಪ್ರಧಾನ ಭಾಷೆಯಾಗಿ ಆಯ್ಕೆ ಮಾಡಿಕೊಂಡಿವೆ. ಇನ್ನು ಉಳಿದಂತೆ ಶೇ.80ರಷ್ಟು ಇಂಗ್ಲೀಷ್‌ ಭಾಷೆಯಲ್ಲಿವೆ.

ವೆಬ್‌ ಸೈಟ್‌ ಕನ್ನಡೀಕರಣದ ಬಗ್ಗೆ ಮಾತುಕತೆ ನಡೆದಿದ್ದು, ಎಲ್ಲಾ ಜಿಲ್ಲಾಧಿಕಾರಿಗಳಿಗೂ ಆದೇಶ ಹೊರಡಿಸುವ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

NO COMMENTS

LEAVE A REPLY