ಮೋದಿ ಹೇಳುವುದೊಂದು ಮಾಡುವುದು ಇನ್ನೊಂದು: ರಾಹುಲ್

ಮೋದಿ ಹೇಳುವುದೊಂದು ಮಾಡುವುದು ಇನ್ನೊಂದು: ರಾಹುಲ್

176
0
SHARE

ಹೊಸದಿಲ್ಲಿ: ದೇಶದ ಬದ್ಧತೆ ಸಂಬಂಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಮಾಣಿಕತೆಯನ್ನು ಎಂದೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಜೇಟ್ಲಿಗೆ ನೇರವಾಗಿ ಹೊಡೆತ ನೀಡಿರುವ ರಾಹುಲ್ ತಮ್ಮ ಟ್ವೀಟ್‌ನಲ್ಲಿ ಧನ್ಯವಾದಗಳು ಜೇಟ್ಲಿ ಅವರೇ, ತಾವಿದ್ದನ್ನು ನೆನಪಿಸಿದ್ದಕ್ಕಾಗಿ, ನಮ್ಮ ಪ್ರಧಾನಿ ತಾವೇನು ಹೇಳುತ್ತಾರೆಂದು ಅರ್ಥಮಾಡಿಕೊಂಡಿರುವುದಿಲ್ಲ ಅಥವಾ ಅರ್ಥಮಾಡಿಕೊಂಡಿದ್ದನ್ನು ಹೇಳುತ್ತಿಲ್ಲ ಎಂದು ಅದೇ ಧಾಟಿಯಲ್ಲಿ ಉತ್ತರಿಸಿದ್ದಾರೆ.

ಕಳೆದ 10 ದಿನಗಳಿಂದ ಸಂಸತ್ತಿನಲ್ಲಿ ಸುಗಮ ಕಲಾಪಕ್ಕೆ ಕಾಂಗ್ರೆಸ್ ಅಡ್ಡಿಯನ್ನುಂಟು ಮಾಡಿದೆ. ಅಂತೂ ಕೊನೆಗೂ ರಾಜ್ಯಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಣಕಾಸು ಸಚಿವ ಜೇಟ್ಲಿ, ಡಾ. ಮನಮೋಹನ್ ಸಿಂಗ್ ಅವರ ಬದ್ಧತೆಯನ್ನು ಪ್ರಧಾನಿ ಮೋದಿ ಪ್ರಶ್ನಿಸಿಲ್ಲ ಎಂದು ಉತ್ತರಿಸಿದ್ದರು.

ಕಾಂಗ್ರೆಸ್ ಪಕ್ಷವು, ಮೋದಿ ತಮ್ಮ ಹೇಳಿಕೆಯನ್ನು ಹಿಂಪಡೆದು ಸದನದಲ್ಲಿ ಕ್ಷಮೆಯನ್ನು ಕೇಳಬೇಕೆಂಬ ಬಿಗು ಪಟ್ಟು ಹಿಡಿದಿತ್ತು.

NO COMMENTS

LEAVE A REPLY