ಫೇಸ್‌ಬುಕ್‌ಗೂ ಬಂತಾ ಆಧಾರ್‌?

ಫೇಸ್‌ಬುಕ್‌ಗೂ ಬಂತಾ ಆಧಾರ್‌?

188
0
SHARE

ಹೊಸದಿಲ್ಲಿ: ಎಲ್ಲದಕ್ಕೂ ‘ಆಧಾರ್‌’ ಆಧಾರವಾಗುತ್ತಿರುವ ಈ ದಿನಗಳಲ್ಲಿ ಫೇಸ್‌ಬುಕ್‌ ಕೂಡ ಹಿಂದೆ ಬಿದ್ದಿಲ್ಲ. ಫೇಕ್‌ ಖಾತೆಗಳಿಗೆ ಬ್ರೇಕ್‌ ಹಾಕುವ ಪರೀಕ್ಷಾರ್ಥ ಫೇಸ್‌ಬುಕ್‌ ಪೈಲಟ್‌ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಹೊಸದಾಗಿ ಫೇಸ್‌ಬುಕ್‌ ಸೇರುವವರಿಗೆ ಆಧಾರ್‌ ಕಾರ್ಡಿನಲ್ಲಿರುವಂತೆ ಹೆಸರು ನೀಡಲು ಪ್ರೇರೇಪಿಸುತ್ತಿದೆ. ಹಾಗೆಂದು ಇದು ಕಡ್ಡಾಯವೇನೂ ಅಲ್ಲ. ಜೊತೆಗೆ, ಸಧ್ಯ ಕೆಲವರಿಗೆ ಮಾತ್ರ ಈ ‘ಪ್ರೇರೇಪಣೆ’ ಕಾಣಸಿಗುತ್ತಿದೆ.

ದೇಶದಲ್ಲಿ 241 ದಶಲಕ್ಷ ಫೇಸ್‌ಬುಕ್‌ ಬಳಕೆದಾರರಿದ್ದು, ಜನರಿಗೆ ಅವರ ನಿಜನಾಮವನ್ನೇ ನೀಡಲು ಪ್ರೋತ್ಸಾಹಿಸುವುದು ತನ್ನ ಉದ್ದೇಶ ಎಂದು ಸಂಸ್ಥೆ ಹೇಳಿದೆ.

NO COMMENTS

LEAVE A REPLY