ಟಿಕೆಟ್ ರಹಿತ ರೈಲು ಪ್ರಯಾಣ: 83 ವ್ಯಕ್ತಿಗಳಿಗೆ ದಂಡಕ್ಕೆ ಆಹ್ವಾನ

ಟಿಕೆಟ್ ರಹಿತ ರೈಲು ಪ್ರಯಾಣ: 83 ವ್ಯಕ್ತಿಗಳಿಗೆ ದಂಡಕ್ಕೆ ಆಹ್ವಾನ

141
0
SHARE

ಮೈಸೂರು(ಡಿ,27,2017):ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದ 83 ವ್ಯಕ್ತಿಗಳ ವಿರುದ್ದ ರೈಲ್ವೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಚಾಮರಾಜನಗರ ಬೆಂಗಳೂರು ಪ್ಯಾಸೆಂಜರ್ ಟ್ರೈನ್ ನಲ್ಲಿ ಮೈಸೂರಿಗೆ  ಪ್ರಯಾಣ ಮಾಡುತ್ತಿದ್ದ 83 ಜನರಿಗೆ ದಂಡ ವಿಧಿಸಿ ಪ್ರಕರಣ ದಾಖಲಿಸಲಾಗಿದೆ. ಮೈಸೂರು ಸಮೀಪದ ಕಡಕೊಳ ಹಾಗೂ ಅಶೋಕಪುರಂ ರೈಲ್ವೆ ನಿಲ್ದಾಣದ ಬಳಿ ಟಿಕೆಟ್ ಚೆಕ್ ಮಾಡಿದಾಗ ಈ ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ.

ವಿಶೇಷ ಟಿಕೆಟ್ ತಪಾಸಣಾ ಅಭಿಯಾನ ನಡೆಸಿದ ರೈಲ್ವೆ ಅಧಿಕಾರಿಗಳು 1989 ರ ರೈಲ್ವೆ ಕಾಯ್ದೆ ನಿಯಮದಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನು 83 ಜನರಿಂದ 9750 ರೂ ದಂಡ ವಸೂಲಿ  ಮಾಡಿ ಪ್ರತ್ಯೇಕ 273 ಪ್ರಕರಣ ದಾಖಲು ಮಾಡಿದ್ದಾರೆ.  ಇಂದು ಒಟ್ಟು 70, 278 ರೂ ದಂಡ ವಸೂಲಿಯಾಗಿದೆ.

NO COMMENTS

LEAVE A REPLY