ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಸಿದ್ದ…

ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಸಿದ್ದ…

151
0
SHARE

ಬೆಂಗಳೂರು(ಡಿ,27,2017):ಮಹದಾಯಿ ಹೋರಾಟಕ್ಕೆ ಬೆಂಬಲಿಸಲು ಪ್ರತಿಭಟನಾಕಾರರು ಮನವಿ ಮಾಡಿದ ಹಿನ್ನೆಲೆ, ಹೋರಾಟಕ್ಕೆ ಕನ್ನಡ ಚಿತ್ರರಂಗ ಸಿದ್ದವಿದೆ. ಜನವರಿ ತಿಂಗಳಲ್ಲಿ ದಿನಾಂಕ ನಿಗದಿ ಮಾಡಿ ಎಂದು  ಫೀಲ್ಮಂ ಛೇಂಬರ್ ಅಧ್ಯಕ್ಷ ಸಾ,ರಾಗೋವಿಂದು ಭರವಸೆ ನೀಡಿದರು.

ಬಿಜೆಪಿ ಕಚೇರಿ ಬಳಿ ಅಹೋರಾತ್ರಿ ಧರಣಿ ಕುಳಿತಿದ್ದ ಮಹದಾಯಿ ಹೋರಾಟಗಾರರು ಇಂದು ರಾಜಭವನ, ಚುನಾವಣಾ ಆಯೋಗ, ಸಿಎಂ ನಿವಾಸ ನಂತರ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ಬಳಿಕ ಫೀಲ್ಮಂ ಛೇಂಬರ್ ಕಚೇರಿಗೆ ತೆರಳಿ ಚಿತ್ರರಂಗದ ಬೆಂಬಲ ಕೋರಿದರು.

ಈ ವೇಳೆ ಮಾತನಾಡಿದ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊರಬರದ ಅವರು, ಹಿಂದಿನಿಂದಲೂ ಚಿತ್ರರಂಗ ಮಹದಾಯಿ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ಹೀಗಾಗಿ ನಗರಗುಂದದಲ್ಲಿ ಹೋರಾಟಕ್ಕೆ ಬೆಂಬಲ ನೀಡಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿ ಆಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೀಲ್ಮಂ ಛೇಂಬರ್ ಅಧ್ಯಕ್ಷ ಸಾ,ರಾ ಗೋವಿಂದು, ನಾಳೆ ಮಹದಾಯಿ ಹೋರಾಟದ ಅಂಗವಾಗಿ ಬೆಂಗಳೂರಿನ ಎಸ್ ಬಿಎಂ ವೃತ್ತದಲ್ಲಿ ಕರಾಳ ದಿನಾಚಾರಣೆ ಆಚರಿಸುತ್ತೇವೆ. ಇನ್ನು ಜನವರಿ ತಿಂಗಳಲ್ಲಿ ಹೋರಾಟಕ್ಕೆ ದಿನಾಂಕ ನಿಗದಿ ಮಾಡಿ ಎಲ್ಲಾ ಕಲಾವಿದರು ಒಗ್ಗಾಟ್ಟಾಗಿ ಬರುತ್ತೇವೆ ಎಂದು ಭರವಸೆ ನೀಡಿದರು

ಇದೇ ಸಮಯದಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ ರಾ ಗೋವಿಂದು “ಜನ ಕರೆದ ಎಲ್ಲಾ ಕಡೆ ಬರಲು ಕಲಾವಿದರಿಗೆ ಕಷ್ಟವಾಗಿತ್ತೆ. ಒಂದೇ ವೇದಿಕೆಯಲ್ಲಿ ಬಂದು ಹೋರಾಟ ಮಾಡಲು ಸಿದ್ದವಾಗಿದ್ದೇವೆ. ಸಿನಿಮಾರಂಗದಿಂದ ನಾವೆಲ್ಲರೂ ರಾಜಕೀಯ ರಹಿತವಾಗಿ ಹೋರಾಟ ಮಾಡುತ್ತೇವೆ. ಚಿತ್ರರಂಗ ಯಾವುದೇ ಪಕ್ಷದ ಪರವಾಗಿಲ್ಲ ನಮಗೂ ಜವಾಬ್ದಾರಿ ಇದೆ  ಎಂದರು.

NO COMMENTS

LEAVE A REPLY