ಅಂಜನಿಪುತ್ರನಿಗೆ ತಾತ್ಕಾಲಿಕ ತಡೆ

ಅಂಜನಿಪುತ್ರನಿಗೆ ತಾತ್ಕಾಲಿಕ ತಡೆ

271
0
SHARE

ಬೆಂಗಳೂರು(ಡಿ.23.2017):ಪುನೀತ್’ ರಾಜ್’ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾ ಪ್ರದರ್ಶಿಸದಂತೆ ಸಿವಿಲ್ ಕೋರ್ಟ್ ತಡೆ ನೀಡಿದೆ.

ವಕೀಲರ ವಿರುದ್ಧ ಅವಹೇಳನಕಾರಿ ಸಂಭಾಷಣೆ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನ ಕ್ಕೆ ತಡೆ ನೀಡಬೇಕೆಂದು 40ನೇ ಸಿವಿಲ್ ನ್ಯಾಯಾಲಯ ಆದೇಶಿಸಿದೆ. ಮುಂದಿನ ವಿಚಾರಣೆವರೆಗೆ ಚಲನಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರ್ಟ್ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ನೋಟಿಸ್ ನೀಡಲಾಗಿದೆ. ವಿಜಯ್ ಕುಮಾರ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಕೋರ್ಟ್ ತಡೆ ನೀಡಿರುವುದರಿಂದ ಅಂಜನಿಪುತ್ರನಿಗೆ ಸಿನಿಮಾಗೆ ದೊಡ್ಡ ವಿಘ್ನ ಉಂಟಾಗಿದೆ. ಕೋರ್ಟ್ ಪ್ರತಿ ನಮ್ಮ ಕೈಗೆ ದೊರಕಿಲ್ಲ ಪ್ರತಿ ಬಂದಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮನರಂಜನೆ ನೀಡುವ ನೆಪದಲ್ಲಿ ಬೇರೆಯವ ಜೀನವದಲ್ಲಿ ಆಟವಾಡಬಾರದು ಎಂದು ಅರ್ಜಿದಾರ ವಿಜಯ್ ಕುಮಾರ್ ತಿಳಿಸಿದ್ದಾರೆ ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ.

NO COMMENTS

LEAVE A REPLY