ದೇಶಕ್ಕೆ ಅನ್ನದಾತನಾದ ರೈತ ದಿನಾಚರಣೆಯನ್ನು ಮೈಸೂರಿನ ಗಂಧದಗುಡಿ ಫೌಂಡೇಶನ್ ವಿಷೇಶವಾಗಿ ಆಚರಿಸಿತು

ದೇಶಕ್ಕೆ ಅನ್ನದಾತನಾದ ರೈತ ದಿನಾಚರಣೆಯನ್ನು ಮೈಸೂರಿನ ಗಂಧದಗುಡಿ ಫೌಂಡೇಶನ್ ವಿಷೇಶವಾಗಿ ಆಚರಿಸಿತು

557
0
SHARE

ಮೈಸೂರು(ಡಿ.23.2017):ದೇಶಕ್ಕೆ ಅನ್ನದಾತನಾದ ರೈತ ದಿನಾಚರಣೆಯನ್ನು ಮೈಸೂರಿನ ಗಂಧದಗುಡಿ ಫೌಂಡೇಶನ್ ವಿಷೇಶವಾಗಿ ಆಚರಿಸಿತು.

ಮೈಸೂರು ವಿವಿ ಯುವರಾಜ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರನ್ನೆರವ ಮೂಲಕ ರೈತ ದಿನಾಚರಣೆಯನ್ನು ಸಂಭ್ರಮಿಸಲಾಯಿತು. ಸುಮಾರು ವಿವಿಧ ಬಗೆಯ ಸಸಿಗಳನ್ನು ನೆಟ್ಟು ಅದರ ಸಂಪೂರ್ಣ ಜವಾಬ್ದಾರಿಯನ್ನು ಗಂಧದಗುಡಿ ಫೌಂಡೇಶನ್ ವಹಿಸಿಕೊಂಡಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ನಟರಾಜು ರವರು ,ಜಯಲಕ್ಷ್ಮಿಪುರಂ ಪಿಎಸ್ಐ ಶ್ರೀಮತಿ ಭವ್ಯ, ಡಾ.ಕೆ.ಸಿ ಶಶಿಧರ್, ಅಡ್ವಕೇಟ್ ಶರತ್ ರಾಜ್ ಹಾಗೂ ಯುವರಾಜ ಕಾಲೇಜಿನ ಆಡಳಿತಾಧಿಕಾರಿಗಳಾದ ಕಾಂತಲಕ್ಷ್ಮಿ ಮತ್ತು ಗಂಧದಗುಡಿ ಫೌಂಡೇಶನ್ ತಂಡದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಇಂದಿನ ಯುವಕರು ವ್ಯವಸಾಯಕ್ಕೆ ಹೆಚ್ಚಿನ ಮಹತ್ವ ನೀಡಿ ರೈತರಾಗಬೇಕು, ಕೃಷಿಯು ಮಹತ್ವದಾಯಕ ಉದ್ಯೋಗವಾಗಬೇಕು ಹಾಗೂ ಇಂದಿನ ಸರ್ಕಾರ ರೈತರ ಬೆಳೆಗೆ ಉತ್ತಮ ಬೆಲೆ ನೀಡಿ ಬೆಂಬಲ ಸೂಚಿಸಬೇಕೆಂದು ಆಗ್ರಹಿಸಿದರು.ಮಿಂಚು ರವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಕರಿಗೆ ಸ್ಪೂರ್ತಿದಾಯಕ ಮಾತನ್ನು ಹೇಳುವ ಮೂಲಕ ಜಾಗೃತಿ ಮೂಡಿಸಿದರು ಹಾಗೂ ಮಾನವ್ ವಿಕಾಸ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ರಾಕೇಶ್ ಗೌಡರು  ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ  ಯುವಕರಿಗೆ  ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಯಶಸ್ವಿಗೊಳಿಸಲಾಯಿತು. ಈ ಕುರಿತು ಮಾತನಾಡಿದ ಗಂಧದಗುಡಿ ಫೌಂಡೇಶನ್ ಅಧ್ಯಕ್ಷರಾದ ಮೋಹನ್ ರವರು ಕಾರ್ಯಕ್ರಮಕ್ಕೆ ನೆರೆದಿದ್ದ ಎಲ್ಲಾ ಅತಿಥಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತ ಆನಂದವನ್ನು ವ್ಯಕ್ತಪಡಿಸಿದರು.

-ವರದಿ: ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY