ಮೈಸೂರು ಗಂಧದಗುಡಿ ಫೌಂಡೇಶನ್ ವತಿಯಿಂದ ರೈತ ದಿನ ಆಚರಣೆ

ಮೈಸೂರು ಗಂಧದಗುಡಿ ಫೌಂಡೇಶನ್ ವತಿಯಿಂದ ರೈತ ದಿನ ಆಚರಣೆ

261
0
SHARE

ಮೈಸೂರು(ಡಿ.23.2017):ದೇಶಕ್ಕೆ ಅನ್ನದಾತನಾದ ರೈತ ದಿನಾಚರಣೆಯನ್ನು ಮೈಸೂರು ವಿ ವಿ ಉಪಸ್ಥಿತಿಯಲ್ಲಿ ಗಂಧದಗುಡಿ ಫೌಂಡೇಶನ್ ವಿಷೇಶವಾಗಿ ಆಚರಿಸಿತು.

ಮೈಸೂರು ವಿವಿ ಯುವರಾಜ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರನ್ನೆರವ ಮೂಲಕ ರೈತ ದಿನಾಚರಣೆಯನ್ನು ಸಂಭ್ರಮಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ನಟರಾಜು ರವರು ,ಜಯಲಕ್ಷ್ಮಿಪುರಂ ಪಿಎಸ್ಐ ಶ್ರೀಮತಿ ಭವ್ಯ, ಡಾ.ಕೆ.ಸಿ ಶಶಿಧರ್, ಸಹಾಯಕ ಪ್ರಾಧ್ಯಾಪಕರಾದ ಶರತ್ ರಾಜ್ ಹಾಗೂ ಮಾನವ ವಿಕಾಸ ಫೌಂಡೇಶನ್ ಅಧ್ಯಕ್ಷರಾದ ರಾಕೇಶ್ ಗೌಡ ಮತ್ತು ಗಂಧದಗುಡಿ ಫೌಂಡೇಶನ್ ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಕೇಶ್ ಗೌಡ ರವರು, ಇಂದಿನ ಯುವಕರು ವ್ಯವಸಾಯಕ್ಕೆ ಹೆಚ್ಚಿನ ಮಹತ್ವ ನೀಡಿ ಎಲ್ಲರು ರೈತರಾಗಬೇಕು, ಕೃಷಿಯು ಮಹತ್ವದಾಯಕ ಉದ್ಯೋಗವಾಗಬೇಕು ಹಾಗೂ ಇಂದಿನ ಸರ್ಕಾರ ರೈತರ ಬೆಳೆಗೆ ಉತ್ತಮ ಬೆಲೆ ನೀಡಿ ಬೆಂಬಲ ಸೂಚಿಸಬೇಕೆಂದು ಆಗ್ರಹಿಸಿದರು.ಮಿಂಚು ರವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಕರಿಗೆ ಸ್ಪೂರ್ತಿದಾಯಕ ಮಾತನ್ನು ಹೇಳುವ ಮೂಲಕ ಜಾಗೃತಿ ಮೂಡಿಸಿದರು.

ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಯಶಸ್ವಿಗೊಳಿಸಲಾಯಿತು. ಈ ಕುರಿತು ಮಾತನಾಡಿದ ಗಂಧದಗುಡಿ ಫೌಂಡೇಶನ್ ಅಧ್ಯಕ್ಷರಾದ ಮೋಹನ್ ರವರು ಕಾರ್ಯಕ್ರಮಕ್ಕೆ ನೆರೆದಿದ್ದ ಎಲ್ಲಾ ಅತಿಥಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತ ಆನಂದವನ್ನು ವ್ಯಕ್ತಪಡಿಸಿದರು.

NO COMMENTS

LEAVE A REPLY