ಹ್ಯಾಂಡಲ್ ಇಲ್ಲದ ಬೈಕ್ ಚಾಲನೆ ಮೂಲಕ ಧರ್ಮ ಜಾಗೃತಿ

ಹ್ಯಾಂಡಲ್ ಇಲ್ಲದ ಬೈಕ್ ಚಾಲನೆ ಮೂಲಕ ಧರ್ಮ ಜಾಗೃತಿ

268
0
SHARE

ಕೂಡಲಸಂಗಮ(ಡಿ.23.2017):ವೀರಶೈವ, ಲಿಂಗಾಯತ ಒಂದೇ ಎಂದು ಜಾಗೃತಿ ಮೂಡಿಸಲು ಇಳಕಲ್‌ನ ಈರಣ್ಣ ಕುಂದರಗಿಮಠ ಹ್ಯಾಂಡಲ್ ಇಲ್ಲದ ಬೈಕನ್ನೇರಿ ಕೂಡಲಸಂಗಮದಿಂದ ಗದಗವರೆಗೆ ಶುಕ್ರವಾರ ಪ್ರಯಾಣ ಆರಂಭಿಸಿದರು.

ವಿಶಿಷ್ಟ ರೀತಿಯಲ್ಲಿ ದ್ವಿಚಕ್ರ ವಾಹನ ಓಡಿಸುವ ಮೂಲಕ ಲಿಮ್ಕಾ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ ದಾಖಲೆ ಮಾಡಿರುವ ಈರಣ್ಣ, ಹುಬ್ಬಳ್ಳಿ ಮಾರ್ಗವಾಗಿ ಗದಗ ತಲುಪಲಿದ್ದಾರೆ. ಎರಡೂ ಕೈಗಳಲ್ಲಿ ವೀರಶೈವ, ಲಿಂಗಾಯತ ಧರ್ಮ ಧ್ವಜ ಹಾಗೂ ಓಂ ಕಾರದ ಧ್ವಜ ಹಿಡಿದು ಪ್ರಯಾಣಿಸಿದರು. ‘ಹ್ಯಾಂಡಲ್, ಕ್ಲಚ್‌ ಇಲ್ಲದ ಹೀರೊ ಹೊಂಡಾ ಬೈಕಿಗೆ ಬಂಪರ್ ಹಾಗೂ ಪೆಟ್ರೋಲ್ ಟ್ಯಾಂಕ್‌ ಬಳಿ ಕಬ್ಬಿಣದ ಪೆಟ್ಟಿಗೆಗೆ ಎಕ್ಸಿಲೇಟರ್‌ ಇದೆ. ದೇಹದ ಶಕ್ತಿಯನ್ನು ಸೊಂಟದಲ್ಲಿ ಕೇಂದ್ರೀಕರಿಸಿ ಬೈಕ್‌ ನಿಯಂತ್ರಿಸುತ್ತೇನೆ’ ಎಂದು ಈರಣ್ಣ ಹೇಳಿದರು.

ಈ ಮೂಲಕ ವೀರಶೈವ, ಲಿಂಗಾಯತ ಧರ್ಮ ಒಂದೇ ಎಂಬ ಜಾಗೃತಿ ಮೂಡಿಸುತ್ತಿದ್ದಾರೆ.

NO COMMENTS

LEAVE A REPLY