ಪ್ರೀತಿ ನಿರಾಕರಿಸಿದ ಯುವತಿಗೆ ನಡು ರಸ್ತೆಯಲ್ಲೇ ಬೆಂಕಿ ಹಚ್ಚಿದ ಭಗ್ನಪ್ರೇಮಿ

ಪ್ರೀತಿ ನಿರಾಕರಿಸಿದ ಯುವತಿಗೆ ನಡು ರಸ್ತೆಯಲ್ಲೇ ಬೆಂಕಿ ಹಚ್ಚಿದ ಭಗ್ನಪ್ರೇಮಿ

321
0
SHARE

ಹೈದರಾಬಾದ್(ಡಿ.22.2017):ಪ್ರೀತಿ ನಿರಾಕರಿಸಿದ್ದಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿ ಮೇಲೆ ಸೀಮೆಎಣ್ಣೆ ಸುರಿದು ನಡುರಸ್ತೆಯಲ್ಲೇ ಬೆಂಕಿ ಹಚ್ಚಿರುವ ಘೋರ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಿಕಂದರಾಬಾದ್ ನ ಲಲಾಗುಡಾ ಎಂಬಲ್ಲಿ ಈ ಘಟನೆ ನಡೆದಿದೆ. ಸಂಧ್ಯಾರಾಣಿ(25) ಎಂಬಾಕೆಯ ಮೇಲೆ ಕಾರ್ತಿಕ್ ಎಂಬ ಯುವಕ ಬೆಂಕಿಹಚ್ಚಿ ಕೊಲೆಗೈದಿರುವುದು. ಕಾರ್ತಿಕ್ ಕಳೆದೊಂದು ವರ್ಷದಿಂದ ತನ್ನನ್ನು ಪ್ರೀತಿಸುವಂತೆ ಸಂಧ್ಯಾ ಹಿಂದೆ ಬೆನ್ನು ಬಿದ್ದಿದ್ದ. ಸಂಧ್ಯಾ ಪ್ರೀತಿ ನಿರಾಕರಿಸಿ ನಮ್ಮ ಮನೆ ಪರಿಸ್ಥಿತಿ ಸರಿ ಇಲ್ಲ, ಎಲ್ಲ ಜವಾಬ್ದಾರಿ ನನ್ನ ಮೇಲಿದೆ ಆದ್ದರಿಂದ ನಾವಿಬ್ಬರು ಸ್ನೇಹಿತರಾಗಿ ಇರುವ ಎಂದಿದ್ದಳು ಎನ್ನಲಾಗಿದೆ.

ಪ್ರೀತಿ ನಿರಾಕರಿಸಿದ್ದರಿಂದ ಕುಪಿತನಾಗಿ ಕಾರ್ತಿಕ್, ಸಂಧ್ಯಾ ಸಂಜೆ ಕೆಲಸ ಮುಗಿಸಿ ಮನೆಗೆ ಬರುವಾಗ ಕೃತ್ಯ ಎಸಗಿದ್ದಾನೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ದೌಡಾಯಿಸಿ ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಂಧ್ಯಾರಾಣಿ ಸಾವನ್ನಪ್ಪಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಲಾಲಾಗುಡಾ ಪೊಲೀಸರು ಕಾರ್ತಿಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

NO COMMENTS

LEAVE A REPLY