ಮಧ್ಯಪ್ರದೇಶದ ರಾಜ್ಯಪಾಲರಾಗಲು ಬಯಸಿದ ವಜುಭಾಯಿವಾಲ

ಮಧ್ಯಪ್ರದೇಶದ ರಾಜ್ಯಪಾಲರಾಗಲು ಬಯಸಿದ ವಜುಭಾಯಿವಾಲ

230
0
SHARE

ಬೆಂಗಳೂರು(ಡಿ.21.2017):ಗುಜರಾತ್ ನಲ್ಲಿ ಬಿಜೆಪಿ ಪ್ರಯಾಸದಿಂದ ಜಯಗಳಿಸಿರುವ ಬೆನ್ನಲ್ಲೇ ಹಲವಾರು ಊಹಾಪೂಗಳ ಜತೆಗೆ ಕೆಲವೊಂದು ಸುದ್ದಿಗಳು ಗಮನಸೆಳೆಯುತ್ತಿವೆ. ಅದರಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ತಮ್ಮನ್ನು ಹಿಂದಿ ಭಾಷೆಯ ರಾಜ್ಯಗಳಿಗೆ ವರ್ಗಾಯಿಸುವಂತೆ ಕೇಂದ್ರಕ್ಕೆ ಮನವಿ ಮಾಡಿರುವದು ಮಹತ್ವ ಪಡೆದುಕೊಂಡಿದೆ.

ವಜುಬಾಯಿ ವಾಲಾ ಅವರು ಗುಜರಾತ್‌ ಮುಖ್ಯಮಂತ್ರಿ ಹುದ್ದೆಯ ಮೇಲೆ ಆಸಕ್ತಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ವಾಲಾ ಗುಜರಾತ್ ಸಿಎಂ ಆಗುವಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಈಗ ವಜುಭಾಯಿ ವಾಲಾ ಅವರು ಮಧ್ಯಪ್ರದೇಶದತ್ತ ಹೆಚ್ಚಿನ ಗಮನಹರಿಸಿದ್ದಾರೆ ಎನ್ನಲಾಗಿದ್ದು, ಮಧ್ಯಪ್ರದೇಶ ರಾಜ್ಯಪಾಲರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಹಿಂದಿ ಭಾಷೆಯ ರಾಜ್ಯಗಳಿಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಇದು ಈ ಅಂಶಗಳಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ.

ಕರ್ನಾಟಕದಲ್ಲಿ ವಾಲಾ ಅವರಿಗೆ ಭಾಷೆ ಸಮಸ್ಯೆ ಕಂಡುಬಂದಿದೆ. ಈ ಹಿಂದೆ ಗಣರಾಜ್ಯೋತ್ಸವ, ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ವಜೂಭಾಯಿ ವಾಲಾ ಹಿಂದಿಯಲ್ಲಿ ಭಾಷಣ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕೆಲವು ಕನ್ನಡ ಪರ ಸಂಘಟನೆಗಳು ವಜೂಭಾಯಿ ವಾಲಾ ವಿರುದ್ಧ ದನಿ ಎತ್ತಿದ್ದವು. ಇಂಗ್ಲಿಷ್‌ನಲ್ಲಿ ಬೇಕಿದ್ದರೆ ಭಾಷಣ ಮಾಡಲಿ ಹಿಂದಿಯಲ್ಲಿ ಬೇಡ ಎಂದು ಒತ್ತಾಯಿಸಿದ್ದವು.

ಇದರಿಂದ ಬೇಸರಗೊಂಡಿರುವ ವಜೂಭಾಯಿ ವಾಲಾ ಕರ್ನಾಟಕದಿಂದ ಹಿಂದಿ ಭಾಷೆಯ ರಾಜ್ಯಗಳಿಗೆ ವರ್ಗಾವಣೆ ಮಾಡುವಂತೆ ಕೋರಿಕೊಂಡಿದ್ದಾರೆ.

ಅಲ್ಲದೇ ಡಿಸೆಂಬರ್‌ ಮೂರನೇ ವಾರದ ವೇಳೆಗೆ ಎಲ್ಲ ಕಡತಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ವಜೂಭಾಯಿ ವಾಲಾ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷವಾಗಿ ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮನ್ನು ಪರಿಗಣಿಸದಿರುವಂತೆಯೂ ವಾಲಾ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಪ್ರಮುವಾಗಿ ವಾಲಾ ಮಧ್ಯ ಪ್ರದೇಶ ರಾಜ್ಯಪಾಲರಾಗಿರುವ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

NO COMMENTS

LEAVE A REPLY