ಬೆಂಗಳೂರು-ಮೈಸೂರು ಆರು ಪಥದ ರಸ್ತೆ ನಿರ್ಮಾಣ: 90 ನಿಮಿಷಗಳ ಪ್ರಯಾಣ

ಬೆಂಗಳೂರು-ಮೈಸೂರು ಆರು ಪಥದ ರಸ್ತೆ ನಿರ್ಮಾಣ: 90 ನಿಮಿಷಗಳ ಪ್ರಯಾಣ

210
0
SHARE

ಬೆಂಗಳೂರು(ಡಿ.21.2017):ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ನಡುವಿನ ಆರು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಜನವರಿಯಲ್ಲಿ ಪ್ರಾರಂಭವಾಗಲಿದೆ. ಯೋಜನೆ ಬಗ್ಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನವರಿ ಅಂತ್ಯದೊಳಗೆ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದು, ಟೆಂಡರ್ ಕರೆಯುವ ಪ್ರಕ್ರಿಯೆ ನಡೆದಿದೆ. ಆರುಪಥದ ರಸ್ತೆ ನಿರ್ಮಾಣ ಬಳಿಕ ಕೇವಲ ಒಂದೂವರೆ ತಾಸಿನಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಬಹುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದ್ದಾರೆ.

ಯೋಜನೆಯಲ್ಲಿ ಏನಿರಲಿದೆ?

# 6 ಪಥದ ರಸ್ತೆ ಜತೆಗೆ ಎರಡು ಪಥದ ಸರ್ವೀಸ್ ರಸ್ತೆ

# ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಟೋಲ್

# ಸವಾರರು ಪ್ರಯಾಣಿಸುವ ದೂರದವರೆಗೆ ಮಾತ್ರ ಟೋಲ್ ಪಾವತಿ

# ಯೋಜನೆಗೆ 7 ಸಾವಿರ ಕೋಟಿ ರೂ. ವೆಚ್ಚ

# ಮೊದಲ ಭಾಗವಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ನಿಡಗಟ್ಟವರೆಗೆ 56 ಕಿ.ಮೀ. ಉದ್ದದ ರಸ್ತೆಗೆ 1,989 ಕೋಟಿ ರೂ.

# ಎರಡನೇ ಭಾಗವಾಗಿ ನಿಡಗಟ್ಟ್ಟಂದ ಮೈಸೂರು ವರೆಗೆ 64 ಕಿ.ಮೀ. ರಸ್ತೆ ನಿರ್ವಣಕ್ಕೆ 7,169 ಕೋಟಿ ರೂ. ವೆಚ್ಚ

# ಶೇ.50ರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸಲಿದ್ದು, ಇನ್ನುಳಿದ ಶೇ.50 ಮೊತ್ತವನ್ನು ಗುತ್ತಿಗೆದಾರರು ಸಾಲ ಮಾಡಿ ನಿರ್ವಿುಸಲಿದ್ದಾರೆ.

# ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಸಂಗ್ರಹವಾಗುವ ಟೋಲ್ ಮೂಲಕ ಗುತ್ತಿಗೆದಾರರು ಸಾಲ ಮರುಪಾವತಿ ಮಾಡುತ್ತಾರೆ.

7 ಸಾವಿರ ಕೋಟಿಗೆ ಬೇಡಿಕೆ

ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ವಾರ್ಷಿಕ 7000 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿಂದೆ ಸಾವಿರ ಕೋಟಿ ರೂ.ಗಿಂತ ಕಡಿಮೆ ಹಣ ಬಿಡುಗಡೆಯಾಗುತ್ತಿತ್ತು. 2013-14ರ ನಂತರ 3ರಿಂದ 5 ಸಾವಿರ ಕೋಟಿ ರೂ. ತನಕ ಬಿಡುಗಡೆಯಾಗಿತ್ತು. ಇತ್ತೀಚೆಗೆ ಗೋವಾದಲ್ಲಿ ನಡೆದ ಸಭೆಯಲ್ಲಿ ವಾಸ್ತವತೆ ಆಧಾರದ ಮೇಲೆ ಎಷ್ಟು ಅನುದಾನ ಬೇಕು ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸಚಿವ ಗಡ್ಕರಿ ಸೂಚಿಸಿದ್ದರು. ಅದರಂತೆ ವಾರ್ಷಿಕ 7000 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಮಹದೇವಪ್ಪ ವಿವರಿಸಿದರು.

NO COMMENTS

LEAVE A REPLY