2017 ಮಿಸಸ್ ಕರ್ನಾಟಕ ಕಿರೀಟ ಗಿಟ್ಟಿಸಿಕೊಂಡ ಎಂ.ಸವಿತಾ ಶಂಕರ್

2017 ಮಿಸಸ್ ಕರ್ನಾಟಕ ಕಿರೀಟ ಗಿಟ್ಟಿಸಿಕೊಂಡ ಎಂ.ಸವಿತಾ ಶಂಕರ್

443
0
SHARE

ಬೆಂಗಳೂರು(ಡಿ.20,2017):ಗೃಹಿಣಿಯರಿಗಾಗಿ ಆಯೋಜಿಸಿದ್ದ ಮಿಸಸ್ ಕರ್ನಾಟಕ 2017 ಸ್ಪರ್ಧೆಯಲ್ಲಿ ಮಳವಳ್ಳಿ ಮೂಲದ ಗೃಹಿಣಿ ಎಂ. ಸವಿತಾ ಶಂಕರ್ ಅವರು ಮಿಸಸ್ ಕರ್ನಾಟಕ 2017 ಕಿರೀಟ  ಮುಡಿಗೇರಿಸಿಕೊಂಡಿದ್ದಾರೆ.

ಇಎಸ್‌ಎಚ್ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿ ಬೆಂಗಳೂರಿನಲ್ಲಿ ಈ ಸೌಂದರ್ಯ ಸ್ಪರ್ಧೆಯನ್ನು ಆಯೊಜಿಸಿತ್ತು. ಬಿರುಸಿನಿಂದ ಕೂಡಿದ್ದ ಸ್ಪರ್ಧೆಯ ಅಂತಿಮ ಸುತ್ತಿಗೆ 14 ಗೃಹಿಣಿಯರು ಸೇರ್ಪಡೆಯಾಗಿದ್ದರು. ಇವರುಗಳ ಪೈಕಿ ಶಿವಮೊಗ್ಗದ ಶ್ರೀಮತಿ ರೇಣು ಮೊದಲ ರನ್ನರ್‌ಅಪ್ ಹಾಗೂ ಬೆಂಗಳೂರಿನ ಶ್ರೀಮತಿ ಶುಭರಾಜ್ ಎರಡನೇ ರನ್ನರ್‌ಅಪ್ ಆಗಿ ಆಯ್ಕೆಯಾದರು.

NO COMMENTS

LEAVE A REPLY