ಅರಣ್ಯ ಇಲಾಖೆ ದೂರವಾಣಿ ಸ್ಥಗಿತ: ಕಾಡಂಚಿನ ಜನರ ಅಳಲು

ಅರಣ್ಯ ಇಲಾಖೆ ದೂರವಾಣಿ ಸ್ಥಗಿತ: ಕಾಡಂಚಿನ ಜನರ ಅಳಲು

213
0
SHARE

ಮೈಸೂರು(ಡಿ.19.2017):ಅರಣ್ಯ ಇಲಾಖೆ ಪ್ರಾರಂಭಿಸಿದ್ದ ಸಹಾಯವಾಣಿ (ಟೋಲ್ ಫ್ರೀ) ಸ್ಥಗಿತಗೊಂಡು ಹಲವು ತಿಂಗಳೇ ಕಳೆದಿದ್ದು, ಅರಣ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಸಾಧ್ಯವಾಗದೆ ಸಾರ್ವಜನಿಕು ತೀವ್ರ ರೋದನ ಪಡುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಕಾಡಂಚಿನ ಜನರ ಸಂಪರ್ಕ ಪಡೆಯುವ ನಿಟ್ಟಿನಲ್ಲಿ ಬಂಡೀಪುರ ವ್ಯಾಪ್ತಿಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿತ್ತು. ಇದು ಜನರು ಮತ್ತು ಇಲಾಖೆಯ ನಡುವೆ ಸಂಪರ್ಕ ಸೇತುವೆಯಾಗಿತ್ತು. ಸಮಸ್ಯೆ ಹೇಳಿದರೆ ತುರ್ತಾಗಿ ಇಲಾಖೆ ಕೂಡ ಸ್ಪಂದಿಸುತ್ತಿತ್ತು. ಆದರೆ ಈಗ ಅರಣ್ಯ ಇಲಾಖೆ ವೆಬ್​ಸೈಟ್​ನಲ್ಲಿರುವ 18004251314 ಟ್ರೋಲ್ ಫ್ರೀ ನಂಬರ್​ಗೆ ಕರೆ ಮಾಡಿದರೆ ಈ ಸಂಖ್ಯೆ ಸೇವೆಗೆ ಲಭ್ಯವಿಲ್ಲ ಎಂಬ ಉತ್ತರ ಸಿಗುತ್ತದೆ. ವೆಬ್​ಸೈಟ್​ನ ಮುಖಪುಟದಲ್ಲಿ ಸ್ಥಗಿತಗೊಂಡಿರುವ ನಂಬರ್ ರಾರಾಜಿಸುತ್ತಿದ್ದರೂ ಸರಿಪಡಿಸಲು ಯಾರೂ ಮುಂದಾಗಿಲ್ಲ.

ರಾಜ್ಯದ ಬಹುತೇಕ ಅರಣ್ಯ ವ್ಯಾಪ್ತಿಯಲ್ಲಿ ಕಚೇರಿ ವೇಳೆ ಹಾಗೂ ಆರ್​ಎಫ್​ಒಗಳ ಸರ್ಕಾರಿ ದೂರವಾಣಿ/ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದೆಂದು ಹೇಳುತ್ತಾರೆ. ಆದರೆ ಸಂಜೆ ವೇಳೆ ವನ್ಯಜೀವಿಗಳು ಗ್ರಾಮದತ್ತ ಲಗ್ಗೆ ಇಟ್ಟರೆ, ಪ್ರಾಣಿಗಳಿಂದ ತೊಂದರೆಯಾಗಿ ಕರೆ ಮಾಡಿದರೆ ಸಿಬ್ಬಂದಿ ಮನೆಗೆ ತೆರಳಿರುವುದರಿಂದ ಕರೆ ಸ್ವೀಕರಿಸಲು ಯಾರೂ ಇರುವುದಿಲ್ಲ. ಇನ್ನು ಕೆಲ ಅಧಿಕಾರಿಗಳು ಕರೆಗಳನ್ನೇ ಸ್ವೀಕರಿಸುವುದಿಲ್ಲ ನಿರ್ಲಕ್ಷ್ಯಿಸುತ್ತಾರೆ ಎಂದು ಕೇಳಿ ಬರುತ್ತಿವೆ.

ಕಾಡ್ಗಿಚ್ಚು ನಿಯಂತ್ರಣಕ್ಕೆ ಇಲಾಖೆಗೆ ನೀಡಿರುವ ಸಹಾಯವಾಣಿ 1926ನ್ನು ಬಳಸಿಕೊಳ್ಳಿ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಆದರೆ ಆ ನಂಬರ್​ಗೆ ಕೂಡ ಸೇವೆಗೆ ಲಭ್ಯವಿಲ್ಲ! ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದ್ದು ಅರಣ್ಯದಂಚಿನ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ವನ್ಯಪ್ರಾಣಿಗಳ ದಾಳಿ, ಮರಗಳ ಹನನ, ಕಾಡು ಪ್ರಾಣಿಗಳು ತೊಂದರೆಗೆ ಸಿಲುಕಿದಾಗ ಮಾಹಿತಿ ನೀಡಲು ಸಹಾಯವಾಣಿ ಬೇಕಾಗುತ್ತದೆ. ಇನ್ನಾದರೂ ಅರಣ್ಯ ಇಲಾಖೆ ಸಹಾಯವಾಣಿ ಸರಿಪಡಿಸಬೇಕಿದೆ ಎಂದು ಕಾಡಂಚಿನಲ್ಲಿರುವ ಜನರು ಮನವಿ ಮಾಡಿದರು.

NO COMMENTS

LEAVE A REPLY