ಹೋರಾಟ’ದಿಂದ ಜಿಗಿದು ಬಂದ ‘ಜಿಗ್ನೇಶ್ ಮೇವಾನಿ’..!!

  216
  0
  SHARE

  ‘ಹೋರಾಟ’ದಿಂದ ಜಿಗಿದು ಬಂದ ‘ಜಿಗ್ನೇಶ್ ಮೇವಾನಿ’..!!.

                   ಪ್ರಧಾನಿ ನರೇಂದ್ರ ಮೋದಿವಿರುದ್ಧ ಸೆಡ್ಡು ಹೊಡೆದಿದ್ದ ಯುವ ಹೋರಾಟಗಾರ ‘ಜಿಗ್ನೇಶ್ ಮೇವಾನಿ’ ಬಿಜೆಪಿಯ ಪ್ರತಿಸ್ಪಧಿ೯ ಅಭ್ಯಥಿ೯ ವಿಜಯ್ ಚಕ್ರವತಿ೯ ಜಡೇಜಾ ವಿರುದ್ದ ಸುಮಾರು 17 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.ಗುಜರಾತ್ ನ ‘ಊನ’ದಲ್ಲಿ ಗೋರಕ್ಷಕರಿಂದ ದಲಿತ ಯುವಕರ ಮೇಲೆ ನಡೆದ ದೌಜ೯ನ್ಯದ ಬಳಿಕ ಅದರ ವಿರುದ್ಧ ಬೃಹತ್ ಚಳುವಳಿ ನಡೆಸಿ ದೇಶದ ಗಮನ ಸೆಳೆದು ಬೆಳಕಿಗೆ ಬಂದ ದಲಿತ ಯುವ ನಾಯಕ ‘ಜಿಗ್ನೇಶ್ ಮೇವಾನಿ’.ಈ ಪ್ರಖರ ಹೋರಾಟಗಾರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯಥಿ೯ಯಾಗಿ ಸ್ಪಧಿ೯ಸಿದ್ದರು.ಈ ಕಾರಣಕ್ಕಾಗಿ ಜಿಗ್ನೇಶ್ ಮೇಲೆ ಎರಡು ದಿನಗಳಲ್ಲಿ ಸತತವಾಗಿ ನಾಲ್ಕು ಬಾರಿ ಆಕ್ರಮಣ ದಾಳಿಗಳು ಸಹ ನಡೆದಿದ್ದವು.

                       ವಡ್ಗಾಮ್ ಕ್ಷೇತ್ರಕ್ಕೆ ಕಾಂಗ್ರೆಸ್, ಆಮ್ ಆದ್ಮಿ,ಹಾಗೂ ಎಸ್ ಡಿ ಪಿ ಐ ಪಕ್ಷಗಳು ತಮ್ಮ ಅಭ್ಯಥಿ೯ಗಳನ್ನ ಕಣಕ್ಕಿಳಿಸದೆ ಪಕ್ಷೇತರ ಅಭ್ಯಥಿ೯ಯಾದ ಜಿಗ್ನೇಶ್ ಮೇವಾನಿಗೆ ಬೆಂಬಲ ಸೂಚಿಸಿದ್ದವು ದುರಂತವೆಂದರೆ ದಲಿತಪರವಾದ ಬಿಎಸ್ಪಿ ಪಕ್ಷ ಜಿಗ್ನೇಶ್ ಗೆ ಬೆಂಬಲ ನೀಡದೆ ತನ್ನ ಅಭ್ಯಥಿ೯ಯನ್ನ ಕಣಕ್ಕಿಳಿಸಿ ಕೇವಲ 685 ಮತ ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದೆ.ಏನೇ ಆಗಲಿ ಇದು ಜಿಗ್ನೇಶ್ ಮೇವಾನಿ ಒಬ್ಬರ ಗೆಲುವಲ್ಲ,ಜನ ಚಳುವಳಿಯ ಪ್ರಜಾಪ್ರಭುತ್ವದ ಗೆಲುವು.ಇನ್ನು ಮುಂದಿನ ದಿನಗಳಲ್ಲಿ ಜಿಗ್ನೇಶ್ ಮೇವಾನಿಯ ಈ ಗೆಲುವು ಹೋರಾಟಗಳಿಗೆ ಹೊಸ ಆಯಾಮ ನೀಡಲಿ.ಸೈದ್ಧಾಂತಿಕ ಸ್ಪಷ್ಟತೆಯನ್ನು ತಂದುಕೊಡುವ  ಮೂಲಕ ಹೊಸ ಮಾದರಿಯ ಹೋರಾಟಗಳಿಗೆ ನಾಂದಿಯಾಗಲಿ.

                                                   
  -ಪ್ರಜ್ವಲ್ ಶಶಿ,ತಗಡೂರು.

  NO COMMENTS

  LEAVE A REPLY