ಕಮಲ ಅರಳಿಸಿದ್ದಕ್ಕೆ ಧನ್ಯವಾದಗಳು: ಅಮಿತ್ ಶಾ

ಕಮಲ ಅರಳಿಸಿದ್ದಕ್ಕೆ ಧನ್ಯವಾದಗಳು: ಅಮಿತ್ ಶಾ

201
0
SHARE

ನವದೆಹಲಿ(ಡಿ.18.2017):ಪ್ರಧಾನಿ ಮೋದಿ ಹಾಗು ರಾಹುಲ್ ಗಾಂಧಿಗೆ ಪ್ರತಿಷ್ಠೆಯ ಕಣವಾಗಿದ್ದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಭಾರೀ ಕುತೂಹಲ ಮೂಡಿಸಿತ್ತು. ಉಭಯ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಸುದ್ದಿಗೋಷ್ಟಿ ನಡೆಸಿದ್ದಾರೆ.

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಜನತೆಗೆ ನನ್ನ ಹೃದಯಪುರ್ವಕ ಧನ್ಯವಾದಗಳು. ಮೋದಿಜಿಯವರ ವಿಕಾಸಯಾತ್ರಾದಲ್ಲಿ ಜನರು ಭರವಸೆ ಇಟ್ಟು ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಜನ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಈ ಗೆಲುವು ಜಾತಿವಾದ, ತುಷ್ಟೀಕರಣ ನೀತಿಯ ವಿರುದ್ಧ ಪಡೆದ ವಿಕಾಸವಾದದ ಗೆಲುವು.

ಗುಜರಾತ್’ನಲ್ಲಿ 1990 ರಿಂದ ಬಿಜೆಪಿ ಇದುವರೆಗೂ ಲೋಕಸಭಾ, ವಿಧಾನಸಭಾ ಚುನಾವಣೆಗಳಲ್ಲಿ ಇದುವರೆಗೂ ಸೋತಿಲ್ಲ. ಸತತ 6 ನೇ ಬಾರಿ ಸರ್ಕಾರ ರಚಿಸುತ್ತಿದ್ದೇವೆ. ವಂಶಾಡಳಿತ, ಜಾತಿ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ಇದು ಬಿಜೆಪಿಗೆ ಸಿಕ್ಕ ಪ್ರಜಾಸತ್ತಾತ್ಮಕ ಗೆಲುವು. ಗೆಲುವುಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳು. ಎಲ್ಲೆಲ್ಲಿ ಬಿಜೆಪಿ ಸೋತಿದೆಯೋ ಅಲ್ಲೆಲ್ಲಾ ಬಿಜೆಪಿ ನಿಶ್ಚಿತವಾಗಿ ಗೆಲುವನ್ನು ಸಾಧಿಸುತ್ತದೆ. ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಎಲ್ಲಾ ರಾಜ್ಯಗಳಲ್ಲೂ ಗೆಲುವು ಸಾಧಿಸುತ್ತದೆ ಎನ್ನುವ ಭರವಸೆ ನಮಗಿದೆ. ನಮ್ಮ ಎಲ್ಲಾ ಕಾರ್ಯಕರ್ತರಿಗೂ ಪಕ್ಷದ ಕಡೆಯಿಂದ ಅಭಿನಂದನೆಗಳು ಎಂದು ಅಮಿತ್ ಶಾ ಹೇಳಿದ್ದಾರೆ.

NO COMMENTS

LEAVE A REPLY