ಧೂಳೆಬ್ಬಿಸಿದ ಬೈಕ್ ಸಾಹಸ : ಕುಣಿದು ಕುಪ್ಪಳಿಸಿದ ಯುವಕರು

ಧೂಳೆಬ್ಬಿಸಿದ ಬೈಕ್ ಸಾಹಸ : ಕುಣಿದು ಕುಪ್ಪಳಿಸಿದ ಯುವಕರು

302
0
SHARE

ಮೈಸೂರು(ಡಿ.18.2017):ನಗರದ ಲಲಿತ್ ಮಹಲ್ ಮೈದಾನದಲ್ಲಿ ಯುರೋಪಿನ ರೇಸಿಂಗ್ ಬೈಕ್ ಕೆಟಿಎಂ ಕಂಪನಿಯು ಏರ್ಪಡಿಸಿದ್ದ ಆಕರ್ಷಕ ರೇಸಿಂಗ್ ಸಾಹಸ ಪ್ರದರ್ಶನವನ್ನು ಯುವ ಮನಸ್ಸುಗಳು ಚಪ್ಪಾಳೆ, ಶಿಳ್ಳೆ ಹೊಡೆದು ಪ್ರೋತ್ಸಾಹ ನೀಡಿದರು.

ಈ ಸಾಹಸ ಪ್ರದರ್ಶನವು ಮೂರು ಗಂಟೆಗೂ ಹೆಚ್ಚು ಕಾಲ ನಡೆಹಿತು. ವಿವಿಧ ರಾಜ್ಯಗಳಿಂದ 57 ತಂಡಗಳು ಭಾಗವಹಿದ್ದು, ಟೈರ್ ಗಳ ಮೇಲೆ ರೈಡಿಂಗ್, ಕೈಗಳನ್ನು ಬಿಟ್ಟು ವೇಗವಾಗಿ ಹೋಗುವುದು ಹೀಗೆ ವಿಭಿನ್ನವಾಗಿ ಸಾಹಸ ಮಾಡುತ್ತಿದ್ದ ದೃಶ್ಯಗಳು ನೋಡುಗರ ಎದೆ ಕಲುಕುವಂತೆ ಮಾಡಿತು. ರೇಸಿಂಗ್ ನಲ್ಲಿ ಗೋವಾ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ವಿಜೇತರಿಗೆ ಕೆಟಿಎಂ ಟ್ರೋಫಿ ಹಾಗೂ ಕಿಟ್ ವಿತರಿಸಲಾಯಿತು.

ಪ್ರದರ್ಶನಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಸಾಹಸ ಕ್ರೀಡೆಗಳಿಂದ ಯುವಜನತೆ ಹೊಸತನ್ನು ಕಲಿಯುತ್ತಾರೆ ಹಾಗೂ ಸಾಧನೆ ಮಾಡುವ ಹಂಬಲ ಹೆಚ್ಚಾಗುತ್ತದೆ. ಆದರೆ ಸಾಹಸ ಮಾಡುವಾಗ ಎಚ್ಚರ ವಹಿಸುವುದು ಒಳಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್, ಯುವಮೋರ್ಚ ಉಪಾಧ್ಯಕ್ಷ ಬಿ.ಹರ್ಷವರ್ಧನ್, ಬಸವೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಉಸ್ತುವಾರಿಯನ್ನ ವಿಎಸ್ ಪಿ ಎಂಟರ್ ಟೈನ್ ಮೆಂಟ್ ಪ್ರ. ಲಿಮಿಟೆಡ್ ಸಂಸ್ಥೆಯು ವಹಿಸಿಕೊಂಡಿದ್ದು, ಅತ್ಯುತ್ತಮವಾಗಿ ನಡೆಸಿಕೊಟ್ಟಿತು.
– ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY