ಇವರಂತ ಫಿಟ್ ಹೀರೋಯಿನ್‌ ಕನ್ನಡ ಇಂಡಸ್ಟ್ರಿಯಲ್ಲಿ ಇಲ್ವಂತೆ…!

ಇವರಂತ ಫಿಟ್ ಹೀರೋಯಿನ್‌ ಕನ್ನಡ ಇಂಡಸ್ಟ್ರಿಯಲ್ಲಿ ಇಲ್ವಂತೆ…!

259
0
SHARE

ಬೆಂಗಳೂರು(ಡಿ.16.2107):ಅತಿಥಿಯಾಗಿ ಬಿಗ್‌ಬಾಸ್‌ ಮನೆಗೆ ಬಂದಿರುವ ಸಂಯುಕ್ತಾ ಹೆಗ್ಡೆ, ತನ್ನ ನೇರ ನುಡಿಗಳಿಂದ ಮತ್ತೊಬ್ಬರ ಮನಸ್ಸು ನೋಯಿಸುತ್ತಾರೆ. ಆದರೆ ತನ್ನ ಬಗ್ಗೆ ತನ್ನ ಆಪ್ತ ಗೆಳತಿ ಲಾಸ್ಯಾ ಒಂದು ಚಿಕ್ಕ ಅಭಿಪ್ರಾಯ ಹೇಳಿದರೆ ಅದನ್ನು ಸಹಿಸಲಾರಳು.

ಇದೇ ರೀತಿಯ ಒಂದು ಸನ್ನಿವೇಶ 61ನೇ ದಿನ ನಡೆಯಿತು. ದಿವಾಕರ್‌ ‘ನೀವು ಮೇಕಪ್‌ ಹಾಕಿದರೆ ಚೆನ್ನಾಗಿ ಕಾಣುತ್ತೀರಾ, ಮೇಕಪ್‌ ಇಲ್ಲದೆ ನಿಮ್ಮನ್ನು ನೋಡಿದರೆ ಹೀರೋಯಿನ್‌ ಅಂತ ಅನಿಸುವುದೇ ಇಲ್ಲ’ ಎಂದಾಗ ಅದು ಸಂಯುಕ್ತಾಳ ಬ್ಯೂಟಿಗೆ ಪೆಟ್ಟಾದರೂ ಅದನ್ನು ತೋರ್ಪಡಿಸಿದೆ ಸಮಜಾಯಿಷಿ ನೀಡುವ ಭರದಲ್ಲಿ ‘ನನ್ನಷ್ಟೂ ಫಿಟ್ ಹೀರೋಯಿನ್‌ ಕನ್ನಡ ಇಂಡಸ್ಟ್ರಿಯಲ್ಲಿ ಇಲ್ಲ’ ಎಂದಿದ್ದಾರೆ.

ಕ್ಯಾಮರಾ ಕಣ್ಣುಗಳು ನನ್ನನ್ನು ನೋಡುತ್ತಿರುತ್ತದೆ. ನಾನು ಒಳ್ಳೆ ರೀತಿಯಲ್ಲಿ ಹೊರ ಜಗತ್ತಿಗೆ ಪ್ರೊಜೆಕ್ಟ್‌ ಆಗಬೇಕೆಂಬ ಅವರ ಭಾವನೆ ನಡತೆಯಲ್ಲೇ ಎದ್ದು ಕಾಣುತ್ತದೆ. ತನ್ನ ಬಗ್ಗೆ ಯಾರು ಏನಾದರೂ ಹೇಳಿದರೆ ಸಹಿಸದ ಸಂಯುಕ್ತಾ ತಾನು ಸರಿ ಎಂದು ವಾದ ಮಾಡುತ್ತಾಳೆ.

NO COMMENTS

LEAVE A REPLY