ಪ್ರೇಮ’ಕುಮಾರಿಗೆ ಶುಭಹಾರೈಸಿದ ರಾಮದಾಸ್

ಪ್ರೇಮ’ಕುಮಾರಿಗೆ ಶುಭಹಾರೈಸಿದ ರಾಮದಾಸ್

281
0
SHARE

ಮೈಸೂರು(ಡಿ,15,2017):ಪ್ರೇಮಕುಮಾರಿ ತಮ್ಮ ವಿರುದ್ಧ ಚುನಾವಣಾ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಾಮದಾಸ್, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆ ಎದುರಿಸಬಹುದು. ಪ್ರೇಮಕುಮಾರಿ ಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ.

ಈ ಕುರಿತು ಮಾತನಾಡಿದ ಎಸ್ ಎ ರಾಮದಾಸ್, ನಾನು ಯಾವಗಲೇ ಹೊರಾಟಕ್ಕೆ ಮುಂದಾದರು ಪ್ರೇಮಕುಮಾರಿ ಈ ರೀತಿ ತೊಂದರೆ ನೀಡುತ್ತಿದ್ದಾಳೆ. ಇದರ ಹಿಂದೆ ಬಲಿಷ್ಠ ವ್ಯಕ್ತಿಗಳ ಕುಮ್ಮಕ್ಕು ಇರಬಹುದು. ಆದರೆ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಲ್ಲ. ಸಾಮಾನ್ಯನಾದ ನನ್ನನ್ನು ಜಿಲ್ಲಾ ಮಂತ್ರಿ ಮಾಡಿದ ಜನ ನನಗೆ ಬಹಳ ಮುಖ್ಯ. ಅವರಿಗಾಗಿ ನಾನ್ನ ಜೀವ ಹೋದರೂ ಸರಿಯೇ ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ.

ಪ್ರಕರಣದ ಕೋರ್ಟ್ ಮುಂದೆ ಇರುವುದರಿಂದ ಮಾತುಕತೆಯ ಪ್ರಶ್ನೆಯೇ ಇಲ್ಲ. ಎಲ್ಲವನ್ನೂ ಜನರು ನೋಡುತ್ತಿದ್ದಾರೆ, ಅವರೇ ತೀರ್ಮಾನ ಮಾಡುತ್ತಾರೆ ಎಂದು ರಾಮದಾಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

NO COMMENTS

LEAVE A REPLY