108 ಕೈದಿಗಳಿಗೆ ಬಿಡುಗಡೆ ಭಾಗ್ಯ:ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

108 ಕೈದಿಗಳಿಗೆ ಬಿಡುಗಡೆ ಭಾಗ್ಯ:ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

213
0
SHARE

ಬೆಂಗಳೂರು(ಡಿ.14.2017):ಸಮಾಜದಲ್ಲಿ ಕೆಟ್ಟ ನಡವಳಿಕೆ ಹಾಗೂ ಕೊಲೆ, ಸುಲಿಗೆ, ಧರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದ 108 ಕೈದಿಗಳಿಗೆ ಬಿಡುಗಡೆಯ ಭಾಗ್ಯ ದೊರೆತಿದೆ ಎಂದು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ಎಲ್ಲಾ ಕೈದಿಗಳು ತಮಗೆ ವಿಧಿಸಿದ 14 ವರ್ಷಗಳ ಜೈಲುಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸದವರಾಗಿದ್ದು, ಹಾಗೂ ಕೆಲವರು ಸನ್ನಡೆತೆ ಉಳ್ಳವರಾಗಿದ್ದಾರೆ.ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 5 ಮಹಿಳೆಯರು ಸೇರಿ 50 ಕೈದಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸುವ ಮೂಲಕ ಬಿಡುಗಡೆ ಮಾಡಲಾಯಿತು. ಮೈಸೂರು ಕೇಂದ್ರ ಕಾರಾಗೃಹದ 17, ಬೆಳಗಾವಿಯಲ್ಲಿ 12, ಕಲಬುರ್ಗಿಯಲ್ಲಿ 9,ವಿಜಯಪುರ 8,ಬಳ್ಳಾರಿ 8 ಹಾಗೂ ಧಾರವಾಡದ 4 ಕೈದಿಗಳು ಸಹ ಬಿಡುಗಡೆ ಮಾಡಲಾಗಿದೆ.

ಕಳೆದ ಗಣರಾಜ್ಯೋತ್ಸವದಂದು ಬಿಡುಗಡೆಯಾಗಬೇಕಿದ್ದ ಕೈದಿಗಳು ಸೇರಿ, ಬಿಡುಗಡೆಗೆ ಅರ್ಹರಾದ ಕೈದಿಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದೆವು. ಅದಕ್ಕೆ ಮಂಗಳವಾರವಷ್ಟೇ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಅಕಾಲಿಕವಾಗಿ ಕೈದಿಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಾರಾಗೃಹಗಳ ಇಲಾಖೆಯ ಡಿಐಜಿ ಎಚ್‌.ಎಂ.ರೇವಣ್ಣ ತಿಳಿಸಿದ್ದಾರೆ.

NO COMMENTS

LEAVE A REPLY