ಸುನೀಲ್ ಹೆಗ್ಗರವಳ್ಳಿ ಮನೆಗೆ ಪೊಲೀಸ್ ಬಿಗಿ ಬಂದೊಬಸ್ತ್

ಸುನೀಲ್ ಹೆಗ್ಗರವಳ್ಳಿ ಮನೆಗೆ ಪೊಲೀಸ್ ಬಿಗಿ ಬಂದೊಬಸ್ತ್

202
0
SHARE

ಬೆಂಗಳೂರು(ಡಿ.13.2017):ನನಗೆ ಭದ್ರತೆ ಬೇಕು ಈಗಾಗಲೆ ಸಿಎಂ, ಹೋಮ್ ಮಿನಿಸ್ಟರ್’ರನ್ನು ಭೇಟಿ ಮಾಡಿದ್ದೇವೆ. ಯಾಕೆ ಭದ್ರತೆ ಬೇಕು ಅಂತ ಇಂಟಲಿಜೆನ್ಸ್’ನವರು ಕರೆ ಮಾಡಿದ್ದರು.ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಸುನೀಲ್ ಹೆಗ್ಗರವಳ್ಳಿ ಹೇಳಿದ್ದಾರೆ.  

ಈಗಾಗಲೆ ಮನೆಯ ಬಳಿ ಲೋಕಲ್ ಪೊಲೀಸರನ್ನು ಹಾಕಿದ್ದಾರೆ. ಡಿಸಿಪಿ ಶರಣಪ್ಪ ಮುಖಾಂತರ ಸುಬ್ರಹ್ಮಣ್ಯ ಪುರ ಪೊಲೀಸ್ ಪೇದೆಗಳನ್ನು ಹಾಕಿದ್ದಾರೆ. ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ ಅವರಿಗೆ ಭದ್ರತೆ ಬೇಕು ನಮಗೆ ಗನ್ ಮ್ಯಾನ್ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ರವಿ ಬೆಳಗೆರೆ ಒಬ್ಬ ಪ್ರಭಾವಿ ವ್ಯಕ್ತಿ. ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ನನಗೆ ಕರೆ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಲಾಕಪ್ ಇದ್ದಾಗಲೇ ಫೋನ್ ಮಾಡಿ ಮಾತಾಡ್ತಾರೆ ಅಂದರೆ ಅವರ ಪ್ರಭಾವ ಇನ್ನೆಷ್ಟು ಇದೆ ನೀವೆ ಹೇಳಿ ಹೀಗಾಗಿ ಭದ್ರತೆ ಕೋರಿದ್ದೇನೆ ಎಂದು ವಿವರಿಸಿದರು.

NO COMMENTS

LEAVE A REPLY