ನಟ ದರ್ಶನ್ ,ಕಿಚ್ಚ ಸುದೀಪ್ ಸಿಎಂ ಪರ ಚುನಾವಣೆ ಪ್ರಚಾರದ ರಂಗೇರಿಸಲಿದ್ದಾರೆ..

ನಟ ದರ್ಶನ್ ,ಕಿಚ್ಚ ಸುದೀಪ್ ಸಿಎಂ ಪರ ಚುನಾವಣೆ ಪ್ರಚಾರದ ರಂಗೇರಿಸಲಿದ್ದಾರೆ..

1023
0
SHARE

ಬೆಂಗಳೂರು(ಡಿ.12.2017):2018ರ ವಿಧಾನಸಭಾ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಪರ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಪ್ರಚಾರ ನಡೆಸಲಿದ್ದಾರೆ….!

ಚುನಾವಣೆಗೆ ಸ್ಯಾಂಡಲ್‍ವುಡ್’ನ ಗ್ಲಾಮರ್ ಕೊಡಲು ಸಿಎಂ ಪ್ಲಾನ್ ಮಾಡಿದ್ದಾರೆ. ಈ ಮೂಲಕ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಕಲರ್‍ಫುಲ್ ಆಗಿಸಲು ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನೇತೃತ್ವವನ್ನು ವಹಿಸಿರುವ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಸ್ವಕ್ಷೇತ್ರದಲ್ಲಿ ಸಿನಿಮಾ ತಾರೆಯರ ದಂಡು ಇಳಿಸಿ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದ್ದಾರೆ. ನಟ ಸುದೀಪ್, ದರ್ಶನ್, ನಟಿ ರಮ್ಯಾ, ಭಾವನಾ ಅಖಾಡದಲ್ಲಿ ಇರುತ್ತಾರೆ. ಈಗಾಗಲೇ ಪಕ್ಷದ ಪ್ರಚಾರದ ಹೊಣೆ ಹೊರಲು ಮಾಜಿ ಸಂಸದೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇನ್ನು ನಟಿ ಭಾವನಾ ಪ್ರಚಾರದಲ್ಲಿ ಸಕ್ರಿಯವಾಗಿ ಇರುತ್ತಾರೆ. ಇವರ ಜೊತೆಗೆ ದರ್ಶನ್ ತಾಯಿ, ಇವರು ಈಗಾಗಲೇ ಮಹಿಳಾ ಕಾಂಗ್ರೆಸ್ ಘಟಕದಲ್ಲಿದ್ದಾರೆ. ಆದ್ದರಿಂದ ದರ್ಶನ್ ಸಿಎಂ ಕುಟುಂಬಕ್ಕೆ ಮನೆ ಮಗ ಇದ್ದಂತೆ. ಹಾಗಾಗಿ ತಾಯಿ ಜೊತೆಗೆ ದರ್ಶನ್ ಕೂಡ ವರುಣಾ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಅಂತ ಹೇಳಲಾಗಿದೆ.

ಸೋಮವಾರ ಸುದೀಪ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು ಈ ವೇಳೆ ಮುಂದಿನ ಚುನಾವಣೆಯಲ್ಲಿ ಸಿಎಂ ತಮ್ಮ ಹಾಗೂ ಮಗನ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಸುದೀಪ್ ಒಪ್ಪಿಕೊಂಡಿದ್ದು, ಚುನಾವಣಾ ಪ್ರಚಾರದಲ್ಲಿ ಸುದೀಪ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

NO COMMENTS

LEAVE A REPLY