ಫೆ.22 ರಿಂದ ಹತ್ತನೇ ಅಂತಾರಾಷ್ಟ್ರೀಯ  ಚಲನ ಚಿತ್ರೋತ್ಸವ ಪ್ರಾರಂಭ

ಫೆ.22 ರಿಂದ ಹತ್ತನೇ ಅಂತಾರಾಷ್ಟ್ರೀಯ  ಚಲನ ಚಿತ್ರೋತ್ಸವ ಪ್ರಾರಂಭ

211
0
SHARE

ಬೆಂಗಳೂರು(ಡಿ,11,2017):ಹತ್ತನೇ ಬೆಂಗಳೂರು ಅಂತಾರಾಷ್ಟ್ರೀಯ  ಚಲನ ಚಿತ್ರೋತ್ಸವ 2018ರ ಫೆಬ್ರವರಿ 22ರಿಂದ ಮಾರ್ಚ್ 1ರವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಚಲನ ಚಿತ್ರೋತ್ಸವದ ಲಾಂಛನ ಬಿಡುಗಡೆ ಮಾಡಿ ಮುಖ್ಯಮಂತ್ರಿಯವರು ಮಾತನಾಡಿದರು.

ಚಲನ ಚಿತ್ರೋತ್ಸವ ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕ ಕಾಲದಲ್ಲಿ ನಡೆಯಲಿದೆ. ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯದ ಆಶಯದ ಮೇಲೆ ಈ ಬಾರಿಯ ಚಲನ ಚಿತ್ರೋತ್ಸವ ನಡೆಯಲಿದೆ.ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ವಿಧಾನಸೌಧ ಮುಂಭಾಗ ನಡೆಯಲಿದ್ದು, ಇದೇ ವೇಳೆ ಚಲನಚಿತ್ರ ರಂಗದಲ್ಲಿ ಜೀವಮಾನ ಸಾಧನೆಗಾಗಿ ಹತ್ತು ಲಕ್ಷ ರೂ.ನಗದು ಒಳಗೊಂಡ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.

NO COMMENTS

LEAVE A REPLY