ರವಿ ಬೆಳಗೆರೆ ದೊಡ್ಡ ಕುಡುಕ,ಸಾಹಿತ್ಯದ ಬಗ್ಗೆ ಜ್ಞಾನವಿಲ್ಲ: ಪತ್ರಕರ್ತ ಅಗ್ನಿ ಶ್ರೀಧರ್ ಕಿಡಿ

ರವಿ ಬೆಳಗೆರೆ ದೊಡ್ಡ ಕುಡುಕ,ಸಾಹಿತ್ಯದ ಬಗ್ಗೆ ಜ್ಞಾನವಿಲ್ಲ: ಪತ್ರಕರ್ತ ಅಗ್ನಿ ಶ್ರೀಧರ್ ಕಿಡಿ

185
0
SHARE

ಬೆಂಗಳೂರು(ಡಿ,11,2017):ತನ್ನ ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿ ಇದೀಗ ಸಿಸಿಬಿ ಪೊಲೀಸರ ವಶದಲ್ಲಿರುವ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ವಿರುದ್ದ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಕಿಡಿ ಕಾರಿದ್ದಾರೆ.

ರವಿ ಬೆಳಗೆರೆ ಒಬ್ಬ ದೊಡ್ಡ ಕುಡುಕ,ನಾಚಿಕೆ ಇಲ್ಲದ ವ್ಯಕ್ತಿ. ಅವನ ಕ್ರಿಮಿನಲ್ ಟೆಂಡೆನ್ಸಿ ನನಗೆ ಗೊತ್ತು. ಆತ ಕುಡಿತದ ಚಟ ಬಿಟ್ಟ ನಂತರ ಹಾಯ್ ಬೆಂಗಳೂರು ಆರಂಭಿಸಿದ್ದ. ಆದರೆ ಆತನಿಗೆ ಸಾಹಿತ್ಯದ ಬಗ್ಗೆ ಒಂದುಚೂರು ಜ್ಞಾನವಿಲ್ಲ. ಹೀಗಾಗಿ 6 ತಿಂಗಳ ಕಾಲ ಹಾಯಬೆಂಗಳೂರು ನಡೆಸಿದ್ದು ನಾವೇ. ನಂತರ ಅವನಿಗೆ ಬಿಟ್ಟುಕೊಟ್ಟವು ಎಂದು ಅಗ್ನಿ ಶ್ರೀಧರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಗ್ನಿ ಶ್ರೀಧರ್,ರವಿ ಬೆಳಗೆರೆಗೆ ರೌಡಿಗಳ ಪರಿಚಯವಿತ್ತು. ಗುಂಪುಗುಂಪುಗಳ ನಡುವೆ ರವಿಬೆಳಗೆರೆ ವೈಷಮ್ಯ ತಂದು ಹಾಕುತ್ತಿದ್ದನು. ಬಲರಾಮನ ವಿರುದ್ದ ಕಿಟ್ಟಿ ಮಾತು ಕೇಳಿ ಪತ್ರಿಕೆಯಲ್ಲಿ ಬರೆದಿದ್ದ. ರೌಡಿಗಳು ಆತನಿಗೆ ಥಳಿಸಿದ್ದರು. ಆಗ ಆತನಿಗೆ ಅಗ್ನಿ ಶ್ರೀಧರ್ ಅವಶ್ಯಕತೆ ಇತ್ತು. ಆದರೆ ನಾನು ಅವನ ಮಾತು ಕೇಳಿರಲಿಲ್ಲ. ಬಲರಾಮನಿಂದಾಗಿ ನಾನು ಆತನನ್ನು ಭೇಟಿ ಮಾಡಿದ್ದೆ. ಆ ವೇಳೆ ರವಿ ಬೆಳಗೆರೆ ನನ್ನ ಕಾಲುಬುಡದಲ್ಲಿ ಕುಳಿತಿದ್ದ. ಇದನ್ನ ನೋಡಿ ನನಗೆ ಅಸಹ್ಯವೆನಿಸಿತ್ತು.

ನನಗೂ ಮತ್ತು ಆತನಿಗೂ ದೊಡ್ಡ ಗಲಾಟೆ ನಡೆದಿತ್ತು. ಆ ಸಮಯದಲ್ಲಿ ನಾನು ಲಂಕೇಶರ ಬಳಿ ಹೋಗಿದ್ದೆ. ಆಗ ನನ್ನನ್ನು ಭೇಟಿ ಮಾಡಿ ರವಿ ಬೆಳೆಗರೆ ಕ್ಷಮೆ ಕೆಳಿದ್ದ. ನಂತರ ನಾನು ಆತನಿಗೆ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದೆ ಎಂದು ಅಗ್ನಿಶ್ರೀಧರ್ ತಿಳಿಸಿದರು.

NO COMMENTS

LEAVE A REPLY