ಮೈಸೂರು ವಿಧಾನಸಭಾ ಚುನಾವಣೆ: ಕೆಪಿಜೆಪಿ ಪಕ್ಷದಿಂದ ಸಾಮಾನ್ಯ ವ್ಯಕ್ತಿ ಉಮೇಶ್ ಕಣಕ್ಕೆ…

ಮೈಸೂರು ವಿಧಾನಸಭಾ ಚುನಾವಣೆ: ಕೆಪಿಜೆಪಿ ಪಕ್ಷದಿಂದ ಸಾಮಾನ್ಯ ವ್ಯಕ್ತಿ ಉಮೇಶ್ ಕಣಕ್ಕೆ…

860
0
SHARE

ಮೈಸೂರು(ಡಿ,10,2017):ರಿಯಲ್ ಸ್ಟಾರ್ ಉಪೇಂದ್ರ ರವರ ಪ್ರಜ್ಞಾವಂತ ಜನತಾ ಪಕ್ಷದಿಂದ ಜನಸಾಮಾನ್ಯರಾದ ಉಮೇಶ್ ಮುಂಬರುವ ಚುನಾವಣೆಯಲ್ಲಿ ರಾಜಕೀಯ ರಂಗ ಪ್ರವೇಶ ಮಾಡಲು ಆಕಾಂಕ್ಷಿಯಾಗಿದ್ದಾರೆ.

ಕೆಪಿಜೆಪಿ ಪಕ್ಷದ ಸಂಸ್ಥಾಪಕರಾದ ಉಪೇಂದ್ರರವರ ಕಟ್ಟಾ ಅಭಿಮಾನಿಯಾದ ಉಮೇಶ್ ರವರು ಈ ಪಕ್ಷದಿಂದ ಸ್ವರ್ಧಿಸಲು ಬಹಳ ಉತ್ಸಾಹದ ಆಕಾಂಕ್ಷಿಯಾಗಿದ್ದಾರೆ. ಇವರು ಮೈಸೂರಿನ ಹೆಬ್ಬಾಳ್ ಮೂಲದವರಾಗಿದ್ದು,ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತಾರೆ. ವಿಪರ್ಯಾಸವೆಂದರೆ ಈತ ಒಬ್ಬ ಸಮೋಸ ಮಾರಾಟಗಾರ, ಇದರ ಜೊತೆಗೆ ಊಟ,ಉಪಹಾರಗಳನ್ನು ಸಹ ಮಾರಾಟ ಮಾಡುತ್ತಾರೆ. ಸುಮಾರು 20 ವರ್ಷಗಳಿಂದ ಈ ವೃತ್ತಿಯನ್ನು ಮಾಡುತ್ತಿರುವ ಇವರು ಮೈಸೂರು ವಿವಿ ಮಾನಸ ಗಂಗೋಂತ್ರಿ, ಮಹಾರಾಜ ಕಾಲೇಜು ಹಾಗೂ ಯುವರಾಜ ಕಾಲೇಜು ಆವರಣ ಮತ್ತು ಸುಮಾರು ಹತ್ತು ವಿದ್ಯಾರ್ಥಿನಿಯಲಗಳಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಉಪ್ಪಿ ಉಮೇಶನಾದ್ದಾನೆ. ಎಲ್ಲರ ಜೊತೆಗೂ ಕೂಡ ತುಂಬು ಹೃದಯದಿಂದ ಮುಕ್ತವಾಗಿ ಮಾತನಾಡುವ ಈತ ಸಾವಿರಾರು ವಿದ್ಯಾರ್ಥಿಗಳ ಮನಗೆದ್ದಿದ್ದಾರೆ. ಕ್ಷೇತ್ರದ ನಿವಾಸಿಗಳ ಜೊತೆಗೂ ಕೂಡ ಉತ್ತಮ ಸಂಪರ್ಕ ಹೊಂದಿದ್ದಾರೆ. ಸಮಾಜ ಸೇವೆಯನ್ನು ಮಾಡುವ ಈತ ಹಣವಿಲ್ಲದೆ ಹಸಿದ ವಿದ್ಯಾರ್ಥಿಗಳಿಗೆ ಊಟ ಕೂಡುವುದರಲ್ಲಿ ಕರುಣಾಮಯಿ.

ಪ್ರಸ್ತುತ ಇಂದಿನ ರಾಜಕೀಯವು ವಂಶಾರಾಜಕಾರಣ ಅಥವಾ ಹಣವುಳ್ಳವರು ಯಾರಾದರು ರಾಜಕೀಯಾ ಪ್ರವೇಶ ಮಾಡಬಹುದಾಗಿದೆ. ಆದ್ದರಿಂದ ಜನರೊಂದಿಗೆ ಆತೀಯವಾದ ಸಂಪರ್ಕ ಹೊಂದಿರುವರಿಗೆ ಅವಕಾಶ ಸಿಗಬೇಕು ಹಾಗೂ ಸಾಮಾನ್ಯ ಪ್ರಜೆಯು ಕೂಡ ದೇಶವನ್ನು ಆಳಬೇಕೆಂಬುದು ಪ್ರಜಾಪ್ರಭುತ್ವದ ಆಶಯ.

ಈ ಕುರಿತು ಪಕ್ಷದಲ್ಲಿ ಒಂದು ಸುತ್ತಿನ ಒಳ ಮಾತುಕತೆ ನಡೆದಿದೆ, ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಉಮೇಶ್ ರವರಿಗೆ ಟಿಕೇಟ್ ಸಿಗುವುದು ಬವುತೇಕ ಖಚಿತವಾಗಿದೆ.

NO COMMENTS

LEAVE A REPLY