ಪ್ರೀತಿ ಒಪ್ಪದ ಕಾರಣ ತಂದೆಗೆ ಚಾಕುವಿನಿಂದ ಇರಿದ ಪುತ್ರ

ಪ್ರೀತಿ ಒಪ್ಪದ ಕಾರಣ ತಂದೆಗೆ ಚಾಕುವಿನಿಂದ ಇರಿದ ಪುತ್ರ

161
0
SHARE

ಬೆಂಗಳೂರು(ಡಿ,10,2017):ತನ್ನ ಪ್ರೀತಿಗೆ ಸಮ್ಮತಿ ನೀಡದ ಕಾರಣ ತಂದೆಗೆ ಅವರ ಪುತ್ರನೇ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತ್ಯಾಗರಾಜ ನಗರದಲ್ಲಿ ಈ ಘಟನೆ ನಡೆದಿದೆ. ಕತ್ರಿಗುಪ್ಪೆ ಕಾರ್ಪೋರೇಟರ್  ಸಂಗಾತಿ ವೆಂಕಟೇಶ್ ಎಂಬುವವರಿಗೆ ಅವರ ಪುತ್ರ ಸಾಗರ್ ಚಾಕು ಇರಿದಿದ್ದಾನೆ ಎನ್ನಲಾಗುತ್ತಿದೆ. ತ್ಯಾಗರಾಜನಗರದ ಮನೆಯಲ್ಲಿ ತನ್ನ ತಂದೆ ಸಂಗಾತಿ ವೆಂಕಟೇಶ್ ಗೆ ಪುತ್ರ ಸಾಗರ್ ಚಾಕುವಿನಿಂದ ಇರಿದ್ದಿದ್ದಾನೆ.

ಹುಡುಗಿಯೋರ್ವಳನ್ನು ಸಾಗರ್ ಪ್ರೀತಿಸಿದ್ದನು.ಇದನ್ನು ಒಪ್ಪಿಕೊಳ್ಳಲು ತಂದೆ ಸಂಗಾತಿ ವೆಂಕಟೇಶ್ ನಿರಾಕರಿಸಿದ್ದಾರೆ. ಇದರಿಂದ ಕೋಪಿತಗೊಂಡ ಪುತ್ರ ಸಾಗರ್ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡಿರುವ ಕಾರ್ಪೋರೇಟರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

NO COMMENTS

LEAVE A REPLY