ನನ್ನ ತಂದೆ ನಿರಪರಾಧಿ: ರವಿ ಬೆಳಗೆರೆ ಪುತ್ರಿ ಭಾವನಾ ಹೇಳಿಕೆ

ನನ್ನ ತಂದೆ ನಿರಪರಾಧಿ: ರವಿ ಬೆಳಗೆರೆ ಪುತ್ರಿ ಭಾವನಾ ಹೇಳಿಕೆ

224
0
SHARE

ಧಾರವಾಡ(ಡಿ,9,2017):ನನ್ನ ತಂದೆ ತಪ್ಪು ಮಾಡಿಲ್ಲ, ಅವರು ನಿರಪರಾಧಿ. ಆರೋಪ ಮುಕ್ತರಾಗಿ ಹೊರಬರಲಿದ್ದಾರೆ’ ಎಂದು ರವಿ ಬೆಳಗೆರೆ ಅವರ ಪುತ್ರಿ ಭಾವನಾ ತಮ್ಮ ತಂದೆ ಪರವಾಗಿ ಹೇಳಿದ್ದಾರೆ.

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ತಮ್ಮ ತಂದೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಇಂದು ಪ್ರತಿಕ್ರಿಯಿಸಿದ ಭಾವನಾ ‘ಅಪ್ಪ ಒಬ್ಬರನ್ನು ಕೊಲ್ಲುವ ನಿರ್ಧಾರಕ್ಕೆ ಹೋಗಿರಲು ಸಾಧ್ಯವಿಲ್ಲ, ಅವರು ಖಂಡಿತ ನಿರಪರಾಧಿ, ನಾನು ಅವರ ಮಗಳು ಎಂದಿಗೂ ಅವರ ಪರವಾಗಿಯೇ ನಿಲ್ಲುತ್ತೇನೆ ಎಂದಿದ್ದಾರೆ.

ಎರಡನೇ ಪತ್ನಿ ಯಶೋಮತಿ ಅವರ ಬಗ್ಗೆ ಏನನ್ನು ಹೇಳಲ್ಲ. ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ, ಅವರ ಬಗ್ಗೆ ನನಗೆ ಗೊತ್ತೂ ಇಲ್ಲ ಎಂದು ತಿಳಿಸಿದ ಭಾವನಾ, ಸಿಸಿಬಿ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಸೋಮವಾರ ಮಂಗಳವಾರ ಜಾಮೀನು ಸಿಗಬಹುದು. ನಮ್ಮ ತಂದೆ ಕೇಸ್ ನಲ್ಲಿ ಸುಲಭವಾಗಿ ಹೊರ ಬರ್ತಾರೆ ಎಂದು ಹೇಳಿದರು.

NO COMMENTS

LEAVE A REPLY