ಸುಪಾರಿ ನೀಡಿದ ಸುದ್ದಿ ಕೇಳಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಶಾಕ್…!

ಸುಪಾರಿ ನೀಡಿದ ಸುದ್ದಿ ಕೇಳಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಶಾಕ್…!

339
0
SHARE

ಬೆಂಗಳೂರು(ಡಿ,8,2017):ತನ್ನ ಹತ್ಯೆಗೆ ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಸುಪಾರಿ ನೀಡಿದ ಕುರಿತು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಹತ್ಯೆಗೆ ರವಿ ಬೆಳಗೆರೆ ಅವರು ಸುಪಾರಿ ನೀಡಿದ ಸುದ್ದಿ ಕೇಳಿ ನನಗೆ ಶಾಕ್ ಆಯ್ತು. ರವಿ ಬೆಳಗೆರೆ ಈ ರೀತಿ ಮಾಡ್ತಾರೆ ಅಂತಾ ನಾನು ತಿಳಿದಿರಲಿಲ್ಲ. ಹಳೆಯದನ್ನು ನೆನೆಸುಕೊಂಡರೇ ಇದು ನಿಜ ಅನ್ಸುತ್ತೆ ಎಂದು  ಸುನೀಲ್ ಹೆಗ್ಗರವಳ್ಳಿ ತಿಳಿಸಿದ್ದಾರೆ.

ನಮ್ಮಿಬ್ಬರ ಸ್ನೇಹ 17 ವರ್ಷದ್ದು. ಅಂದು ನಾನು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಬಿಟ್ಟಾಗ ಕೆಲಸಕ್ಕೆ ಬಾ ನೀನು ಒಳ್ಳೆಯ ಬರಹಗಾರ.  ನಿನ್ನಂತಹವರು ಬೇಕು ಬಾ ಎಂದು ಹಲವು ಬಾರಿ ಕರೆದಿದ್ದರು. ನಾನು ಹೋಗಲಿಲ್ಲ. ಬಳಿಕ ಟಿವಿ ಇನ್ವೆಟರ್ಸ್  ಬರ್ತಾರೆ ಬಾ ಅಂದಿದ್ದರು. ಹೀಗಾಗಿ 2016 ಡಿಸೆಂಬರ್ 24ರಂದು ಆಫೀಸ್ ಗೆ ಹೋಗಿದ್ದೆ. ಅದ್ರೆ ಅಲ್ಲಿ  ಯಾರೂ ಇರಲಿಲ್ಲ ಎಂದು ಸುನೀಲ್ ಹೆಗ್ಗರವಳ್ಳಿ  ಹೇಳಿದ್ದಾರೆ.

ಈ ಹಿಂದೆ  ಕೊರಿಯರ್ ಮೂಲಕ ಪುಸ್ತಕ ಬಂದಿತ್ತು. ನಂತರ  ಅನಾಮಿಕರು ಮನೆ ಮುಂದೆ ಬಂದು ಹೋಗಿದ್ರು. ಇವೆಲ್ಲವನ್ನು ನೋಡಿದರೇ ಸುಪಾರಿ ನೀಡಿದ್ದು ನಿಜ ಅನ್ಸುತ್ತೆ ಎಂದು ಸುನೀಲ್ ಹೆಗ್ಗರವಳ್ಳಿ ಆತಂಕ ವ್ಯಕ್ತಪಡಿಸಿದರು.

NO COMMENTS

LEAVE A REPLY