ಬೆಚ್ಚಿಬೀಳುವ ಸ್ಪೋಟಕ ಸುದ್ದಿ:ಸಹ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಪತ್ರಕರ್ತ ರವಿಬೆಳಗೆರೆ ಆರೆಸ್ಟ್

ಬೆಚ್ಚಿಬೀಳುವ ಸ್ಪೋಟಕ ಸುದ್ದಿ:ಸಹ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಪತ್ರಕರ್ತ ರವಿಬೆಳಗೆರೆ ಆರೆಸ್ಟ್

483
0
SHARE

ಬೆಂಗಳೂರು(ಡಿ,8,2017):ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಪ್ರಕರಣ ಜಾಡು ಹಿಡಿದು ಹೊರಟ ಪೊಲೀಸರು ಮತ್ತೊಂದು ಸ್ಪೋಟಕ ಪ್ರಕರಣವನ್ನು ಬಯಲು ಮಾಡಿದ್ದಾರೆ.

ತನ್ನ ಸಹ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ  ಖ್ಯಾತ ಪತ್ರಕರ್ತ ರವಿಬೆಳೆಗೆರೆ ಅವರು ಭಿಮಾತೀರದ ಹಂತಕರಿಗೆ ಸುಪಾರಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದೀಗ ರವಿ ಬೆಳಗೆರೆಯವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹಾಯ್ ಬೆಂಗಳೂರು ಸಂಪಾದಕರಾಗಿರುವ ರವಿಬೆಳೆಗೆರೆ ಜತೆ  ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ತಮ್ಮ 2ನೇ ಪತ್ನಿ ಜತೆ ಸುನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧ ಹೊಂದಿದ್ದರು. ಹೀಗಾಗಿ ಸಿಟ್ಟಿಗೆದ್ದ ರವಿಬೆಳಗೆರೆ  ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ವಿಜಯಪುರ ಮೂಲದ ಶಾರ್ಪ್ ಶೂಟರ್ ಶಶಿ ಮುಂಡೆವಾಡಗೆ 30 ಲಕ್ಷಕ್ಕೆ ಸುಪಾರಿ ನೀಡಿದ್ದರು ಎಂಬ ಮಾಹಿತಿ ಸುದ್ದಿ ವಾಹಿನಿಗಳಿಂದ ತಿಳಿದು ಬಂದಿದೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಶಾರ್ಪ್ ಶೂಟರ್ ಶಶಿ ಮಂಡಿವಾಡರನ್ನು ಎಸ್ ಐಟಿ ಬಂಧಿಸಿ ತನಿಖೆಗೊಳಪಡಿಸಿತ್ತು. ಈ ವೇಳೆ ವಿಚಾರ ಬಹಿರಂಗಗೊಂಡಿದೆ ಎನ್ನಲಾಗುತ್ತಿದೆ.

NO COMMENTS

LEAVE A REPLY