ಮೈಸೂರು ಕಾರಾಗೃಹದ ಖೈದಿಯಿಂದ ಉದ್ಯಮಿಗೆ ಬೆದರಿಕೆ ಕರೆ

ಮೈಸೂರು ಕಾರಾಗೃಹದ ಖೈದಿಯಿಂದ ಉದ್ಯಮಿಗೆ ಬೆದರಿಕೆ ಕರೆ

219
0
SHARE

ಮೈಸೂರು(ಡಿ.8,2017):ಮೈಸೂರು ಕೆಂದ್ರ ಕಾರಾಗೃಹದಿಂದಲೇ ಖೈದಿಯೋರ್ವ ಉದ್ಯಮಿಗೆ ಬೆದರಿಕೆ ಹಾಕಿ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಖೈದಿ ಬಸವರಾಜು ಅಲಿಯಾಸ್ ಬಸವ ಎಂಬಾತನೇ ಮಂಡ್ಯ ಉದ್ಯಮಿ ಚಂದ್ರ ಶೇಖರ್ ಎಂಬುವವರಿಗೆ ಕರೆ ಮಾಡಿ ಬೆದರಿಕೆ ಹಾಕಿ 20ಲಕ್ಷರೂ.ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ, ಈ ಕುರಿತು ಚಂದ್ರ ಶೇಖರ್ ಡಿವೈಎಸ್ಪಿಗೆ ದೂರು ನೀಡಿದ್ದು,ಉದ್ಯಮಿ ಚಂದ್ರ ಶೇಖರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಕಾರಾಗೃಹದ ಅಧೀಕ್ಷಕ ಪಿ.ವಿ.ಆನಂದರೆಡ್ಡಿ ಖೈದಿ ಬಸವರಾಜು ಹಾಗೂ ಕುಮಾರ ಅವರ ಕೊಠಡಿಗಳನ್ನು ಪರಿಶೀಲಿಸಿದಾಗ ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್, ಮೂರು ಸಿಮ್, 135ಗ್ರಾಂ ಗಾಂಜಾ ದೊರಕಿದೆ ಎನ್ನಲಾಗಿದೆ.

ಇದಕ್ಕೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣನಾ ಎಂಬ ಪ್ರಶ್ನೆ ಮೂಡಿದ್ದು, ಇಂತಹ ಕೃತ್ಯಗಳಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

NO COMMENTS

LEAVE A REPLY