ಮೈಸೂರು ವಿವಿ ಉನ್ನತಿಯೇ ನನ್ನ ಧ್ಯೇಯ: ಪ್ರೋ.ಸಿ ಬಸವರಾಜು

ಮೈಸೂರು ವಿವಿ ಉನ್ನತಿಯೇ ನನ್ನ ಧ್ಯೇಯ: ಪ್ರೋ.ಸಿ ಬಸವರಾಜು

242
0
SHARE

ಪ್ರೋ.ಸಿ ಬಸವರಾಜು
ಮಾನ್ಯ ಪ್ರಭಾರ ಕುಲಪತಿಗಳು
ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು

ಮೈಸೂರು ವಿವಿ ಪ್ರಭಾರ ಕುಲಪತಿಗಳಾಗಿ ನೇಮಕಗೊಂಡ ಪ್ರೋ.ಸಿ ಬಸವರಾಜು ರವರ ಸಂದರ್ಶನದಲ್ಲಿ ಅಭಿಪ್ರಾಯ ಮತ್ತು ಇತನುಡಿಗಳು.

1)ವಿಶ್ವವಿದ್ಯಾನಿಲಯದ ಆಡಳಿತದ ಕುರಿತು ನಿಮ್ಮ ಅಭಿಪ್ರಾಯವೇನು?
ವಿಶ್ವವಿದ್ಯಾನಿಲಯದ ಆಡಳಿತವನ್ನು ನಾವು ಸರ್ಕಾರದ ಕಾನೊನಿನ ಚೌಕಟ್ಟಿನೊಳಗೆ ನಿಯಮನುಸಾರ ಕಾರ್ಯನಿರ್ವಹಿಸುವುದು ನಮ್ಮ ಆದ್ಯಕರ್ತವ್ಯ, ಕರ್ತವ್ಯ ಉಲ್ಲಂಘನೆ ಮಾಡಿ ಆಡಳಿತ ನಡೆಸುವುದು ಸಾಧ್ಯವಿಲ್ಲ,

2)ಕುಲಪತಿಗಳಾಗಿ ನಿಮ್ಮ ಅಧಿಕಾರ ಮತ್ತು ಜವಬ್ದಾರಿ ಕುರಿತು ವಿಶ್ಲೇಷಿಸಿ?
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನನ್ನ ಜವಬ್ದಾರಿ ತುಂಬಾ ಇದೆ. ವಿದ್ಯಾರ್ಥಿಗಳ ಸಮಸ್ಯೆ, ಉದ್ಯೋಗದ ಸಮಸ್ಯೆ, ಸಂಶೋಧಕರ ಸಮಸ್ಯೆ, ಮುಂತಾದ ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆ ಶೀಘ್ರದಲ್ಲೇ ಸೂಕ್ತ ಪರಿಹಾರ ಒದಗಿಸಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಕಾನೊನಿನ ಚೌಕಟ್ಟಿನೊಳಗೆ ಎಲ್ಲೂ ಕೂಡ ಕರ್ತವ್ಯ ಉಲ್ಲಂಘನೆ ಮಾಡದೆ, ದಕ್ಷ ಹಾಗೂ ಪ್ರಮಾಣಿಕ ಆಡಳಿತ ನಡೆಸುತ್ತೇನೆ, ಇವೆಲ್ಲದಕ್ಕೂ ಹೆಚ್ಚು ನನ್ನ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲು ಇಚ್ಛಿಸುತ್ತೇನೆ.

3)ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಹೇಗೆ ಮುಂದಾಗಿದ್ದೀರಾ?
ವಿದ್ಯಾರ್ಥಿಗಳ ಸಮಸ್ಯಗಳನ್ನು ಬಗೆಹರಿಸಲು ನಮ್ಮ ಆಡಳಿತ ವರ್ಗ ಹಾಗೂ ಸಿಂಡಿಕೇಟ್‍ನ ಸದಸ್ಯರುಗಳು ಸಭೆ ಕೈಗೊಂಡು ಹಲವು ಯೋಜನೆಗಳನ್ನು ಜಾರಿಗೆ ತರಬೇಕೆಂದು ನಿರ್ಧರಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತ ಸೌಲಭ್ಯವನ್ನು ಜಾರಿ ಮಾಡಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ.

4)ರಾಜ್ಯಸರ್ಕಾರ ಮೂರನೇ ಬಾರಿಯು ಪ್ರಭಾರ ಕುಲಪತಿಗಳ ನೇಮಕ ಮಾಡಿದೆ ಏಕೆ?
ಸರ್ಕಾರದ ಉದ್ದೇಶದಲ್ಲಿ ಹಲವಾರು ಚಿಂತನೆಗಳಿರಬಹುದು, ಆದರೆ ನಾನು ಹಿರಿಯ ಕಾನೊನು ನಿಕಾಯಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವುದರಿಂದ ಹಂಗಾಮಿ ಕುಲಪತಿಗಳಾಗಿ ನೇಮಕ ಮಾಡಿದೆ.

5)ವಿದ್ಯಾರ್ಥಿನಿಲಯಗಳ ಸಮಸ್ಯೆದ ಬಗ್ಗೆ ಯಾವ ಸುಧಾರಣೆ ಕೈಗೊಂಡಿದ್ದೀರಾ?
ಈಗಾಗಲೇ ನಾನು ಮತ್ತು ಆಡಳಿತ ವರ್ಗ ಎಲ್ಲಾ ವಿದ್ಯಾರ್ಥಿನಿಲಯಕ್ಕೆ ಬೇಟಿ ನೀಡಿ ಅಲ್ಲಿದ್ದ ಸಮಸ್ಯಗಳನ್ನು ಬಗೆಹರಿಸಲು ಹಲವು ಯೋಜನೆಗಳನ್ನು ಮಾಡಿದ್ದೇವೆ, ಅದರಂತೆ ಸುಧಾರಣೆ ಹಂತದಲ್ಲಿ ಸಾಗುತ್ತಿವೆ. ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಎಲ್ಲಾ ರೀತಿಯ ಮೂಲಸೌಲಭ್ಯವನ್ನು ಸಂಪೂರ್ಣವಾಗಿ ಒದಗಿಸಿಕೊಡಲು ಮುಂದಾಗಿದ್ದೇನೆ.

6)ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವ ಬಗ್ಗೆ ನಿಮ್ಮ ವೈಯಕ್ತಿಕ ಹಿತನುಡಿಗಳೇನು?
ಇಂತಹ ಭವ್ಯವಾದ ಇತಿಹಾಸ ಹೊಂದಿದ ವಿಶ್ವವಿದ್ಯಾನಿಲಯ ಕುರಿತು ಹೇಳುವುದು ಶ್ಲಾಘನೀಯ. ಇಲ್ಲಿ ಸೇವೆ ಸಲ್ಲಿಸುತ್ತಿರುವುದು ನನ್ನ ಭಾಗ್ಯ. ಕೆಲವು ವರ್ಷಗಳ ಹಿಂದೆ ನಾನು ಇಲ್ಲಿಯೇ ವಿದ್ಯಭ್ಯಾಸ ಮಾಡಿ, ಉಪನ್ಯಾಸಕರಾಗಿ, ಸಿಂಡಿಕೇಟ್ ಸದಸ್ಯರಾಗಿ, ಮೂರು ವರ್ಷಗಳ ಕಾಲ ಕುಲಸಚಿವರಾಗಿ ಸೇವೆಸಲ್ಲಿಸಿ ನಂತರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಕುಲಪತಿಗಳಾಗಿ ಆಡಳಿತ ನಡಸಲು ನನಗೆ ಖುಷಿಯಾಗುತ್ತದೆ.

7)ಕುಲಸಚಿವರಾಗಿ ಕಾರ್ಯನಿರ್ವಹಿದ ನಿಮಗೆ ಕುಲಪತಿಗಳ ಸ್ಥಾನದಲ್ಲಿ ಏನು ವ್ಯತ್ಯಾಸವಿದೆ?
ಹೀಗಾಗಲೆ ಕುಲಸಚಿವರಾಗಿ ಸೇವೆ ಸಲ್ಲಿಸಿದಲ್ಲಿ, ಕುಲಪತಿಗಳಾಗಿಯೂ ಒಂದೇ ರೀತಿಯ ಆಡಳಿತ ವ್ಯವಸ್ಥೆಯು ಇದೆ. ಕುಲಸಚಿವರಾಗಿದ್ದಾಗ ನಾನು ವ್ಯಯಕ್ತಿಕ ನಿರ್ದಾರ ಕೈಗೂಳ್ಳಲು ಸಾಧ್ಯವಿರಲಿಲ್ಲ. ಈ ದಿನಗಳಲ್ಲಿ ನಾನೇ ಕುಲಪತಿಯಾಗಿರುವುದರಿಂದ ಕಾನೊನಿನ ಚೌಕಟ್ಟಿನೊಳಗೆ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಪ್ರಾಧ್ಯಾಪಕರಿಗೆ ಮತ್ತು ವಿಶ್ವವಿದ್ಯಾನಿಲಯ ಆಡಳಿತದಲ್ಲಿ ಸ್ವತಃ ತಿರ್ಮಾನ ತೆಗೆದುಕೊಳ್ಳುವ ಅವಕಾಶ ಸಿಕ್ಕಿದೆ ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇನೆ.

8)ವಿದ್ಯಾರ್ಥಿಗಳಿಗೆ ಯಾವ ಸಂದೇಶ ನೀಡಲು ಬಯಸುತ್ತೀರಾ?
ಯಾವುದೇ ರೀತಿಯ ದುರಾಭ್ಯಾಸಗಳಿಗೆ ಭಾಗಿಯಾಗದೆ, ವಿಶ್ವವಿದ್ಯಾನಿಲಯದಲ್ಲಿರುವ ಎಲ್ಲಾ ರೀತಿಯ ಮೂಲಭೂತ ಸೌಲಭ್ಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳವುದರ ಜೊತೆಗೆ ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಪದವಿದರರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬುದು ನನ್ನ ಆಶಯ.
ಚಂದ್ರಶೇಖರ್ ಬಿ.ಎನ್
ಪತ್ರಿಕೋದ್ಯಮ ವಿದ್ಯಾರ್ಥಿ
ಮಾನಸ ಗಂಗೋತ್ರಿ ಮೈಸೂರು

NO COMMENTS

LEAVE A REPLY