ಯದುವಂಶಕ್ಕಿರುವ ಅಲಮೇಲಮ್ಮನ ಶಾಪ ಏನದು…

ಯದುವಂಶಕ್ಕಿರುವ ಅಲಮೇಲಮ್ಮನ ಶಾಪ ಏನದು…

184
0
SHARE

ಮೈಸೂರು(ಡಿ.7.2017):ಯದುವಂಶದ ಇತಿಹಾಸವನ್ನು ಒಮ್ಮೆ ನೋಡಿದಾಗ ಆಲಮೇಲಮ್ಮನ ಶಾಪ ಮುಖ್ಯವಾಗಿ ಕಾಣಿಸುತ್ತದೆ. ಹೀಗಾಗಿ ತಲೆತಲಾಂತರಗಳಿಂದ ದತ್ತು ಪುತ್ರರ ಮೂಲಕ ವಂಶಮುಂದುವರೆಯುತ್ತಿದೆ.

ಮೈಸೂರು ಪ್ರಾಂತ್ಯದಲ್ಲಿ ಜನಜನಿತವಾಗಿರುವ ಕತೆಯ ಪ್ರಕಾರ, ಹಿಂದೆ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜ್ಯಭಾರ ಮಾಡುತ್ತಿದ್ದ, ಶ್ರೀರಂಗರಾಯನಿಗೆ ಬೆನ್ನುಪಣಿ ಎಂಬ ರೋಗ ಬಂದಿತ್ತು. ಇದರ ನಿವಾರಣೆಗೆ ಶ್ರೀರಂಗರಾಯ ತನ್ನ ಪತ್ನಿ ಅಲಮೇಲಮ್ಮ ಜತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ಆ ವೇಳೆ ಶ್ರೀರಂಗಪಟ್ಟಣ ವಶಪಡಿಸಿಕೊಳ್ಳುವುದು ಸುಲಭ ಎಂದು ಮೈಸೂರಿನ ರಾಜ ಮನೆತನದ ಒಡೆಯರು ದಾಳಿ ನಡೆಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯ ತಲಕಾಡಿನಲ್ಲೇ ಮೃತಪಡುತ್ತಾನೆ. ಬಳಿಕ ಮಾಲಂಗಿಯಲ್ಲಿ ನೆಲೆಸುವ ಅಲಮೇಲಮ್ಮನ ಮೇಲೆ ದಂಡೆತ್ತಿ ಹೋಗಲು ಒಡೆಯರ್ ನಿರ್ಧರಿಸುತ್ತಾರೆ. ಅದನ್ನು ತಿಳಿದು‘ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ’ ಎಂದು ಅಲಮೇಲಮ್ಮ ಶಾಪ ನೀಡಿ ಕಾವೇರಿ ನದಿಗೆ ಹಾರಿದ್ದಾಳೆ ಎನ್ನಲಾಗುತ್ತದೆ.

ಅಲಮೇಲಮ್ಮ ಮೈಸೂರು ಅರಸರಿಗೆ ಶಾಪ ನೀಡಿದ್ದರಿಂದ ಈಗಲೂ ಸಹ ಮಕ್ಕಳಾಗುದಿಲ್ಲ. ಇದರ ವಿಮೋಚನೆಗೆ ಪ್ರತಿ ದಸರಾ ಉತ್ಸವದಲ್ಲೂ ಅಲಮೇಲಮ್ಮ ಮೂರ್ತಿಗೆ ಯದುವಂಶಸ್ಥರು ಪೂಜೆ ಸಲ್ಲಿಸುತ್ತಾರೆ.ಆದರೆ ಶಾಪ ವಿಮೋಚನೆ ಆಗಿಲ್ಲ. ಹೀಗಾಗಿ ತಲೆತಲಾಂತರಗಳಿಂದ ದತ್ತು ಪುತ್ರರ ಮೂಲಕ ವಂಶ ಮುಂದುವರೆಯುತ್ತಿದೆ ಎನ್ನಲಾಗಿದೆ.

NO COMMENTS

LEAVE A REPLY