ಮೈಸೂರಿನಲ್ಲಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ವ್ಯಕ್ತಿಯೊಬ್ಬರು ಸಾವು

ಮೈಸೂರಿನಲ್ಲಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ವ್ಯಕ್ತಿಯೊಬ್ಬರು ಸಾವು

229
0
SHARE

ಮೈಸೂರು(ಡಿ,7,2017):ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.  

ಮೈಸೂರು-ಬೆಂಗಳೂರು ರಸ್ತೆಯ ಬನ್ನಿಮಂಟಪ ಬಳಿ ಈ ಘಟನೆ ನಡೆದಿದೆ. ಕುಶಾಲನಗರ ಟಿಬೆಟಿಯನ್ ಕಾಲೋನಿಯ ತೆಂಜಿನ್ ಖೆಂಟ್ಸೆ (26) ಮೃತಪಟ್ಟ ವ್ಯಕ್ತಿ. ಖೆಂಟ್ಸೆ ಬನ್ನಿಮಂಟಪದ ಬಳಿ ಬಾಡಿಗೆಗೆ ರೂಮಿನಲ್ಲಿ ವಾಸವಿದ್ದರು. ಇಂದು ಮುಂಜಾನೆ ಬನ್ನಿ ಮಂಟಪದ ಬಳಿ ಬೈಕ್ ನಲ್ಲಿ ತೆರಳುವಾಗ ಘಟನೆ ನಡೆದಿದೆ.

ಮಂಜುಕವಿದ ವಾತಾವರಣವಿದ್ದ ಹಿನ್ನಲೆ, ಬೆಳಿಗ್ಗೆ  ರಸ್ತೆಯಲ್ಲಿರುವ ಹಂಪ್ಸ್ ನೋಡದೇ ಖೆಂಟ್ಸೆ ವೇಗ ಚಾಲನೆ ಮಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.ಬಳಿಕ 100ಮೀ.ದೂರದಲ್ಲಿದ್ದ ಮಣ್ಣಿನ ರಾಶಿ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ಎನ್.ಆರ್.ಮೊಹಲ್ಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY