ತ್ರಿಷಿಕಾ ಕುಮಾರಿಗೆ ಗಂಡು ಮಗು ಜನನ. ಯದುವಂಶದಲ್ಲಿ ರಾಜಕುಮಾರನ ಆಗಮನ

ತ್ರಿಷಿಕಾ ಕುಮಾರಿಗೆ ಗಂಡು ಮಗು ಜನನ. ಯದುವಂಶದಲ್ಲಿ ರಾಜಕುಮಾರನ ಆಗಮನ

772
0
SHARE

ಮೈಸೂರು(ಡಿ.6,2017):ಕನ್ನಡಿಗರೆ ನಿಮಗೊಂದು ಸಂತಸದ ಸುದ್ದಿ ಮೈಸೂರು ಸಾಮ್ರಾಜ್ಯದ ನೂತನ ಯುವರಾಜರು ಧರೆಗಿಳಿದಿದ್ದಾರೆ.

ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​​ ಪತ್ನಿಯಾಗಿರುವ ತ್ರಿಷಿಕಾ ರಾಜಸ್ಥಾನದ ದುರ್ಗಪುರದ ರಾಜವಂಶಸ್ಥರ ಕುಟುಂಬಕ್ಕೆ ಸೇರಿದವರಾಗಿದ್ದು, ಗರ್ಭಿಣಿ ಆದಾಗಿನಿಂದಲೂ ಬೆಂಗಳೂರಿನ ಇಂದಿರಾನಗರದಲ್ಲಿರುವ ತಾಯಿ ಮನೆಯಲ್ಲಿ ತಾಯಿಯ ಆರೈಕೆಯಲ್ಲಿದ್ದರು. ಇಂದಿರಾನಗರದಲ್ಲಿರುವ ಕ್ಲೌಡ್ ಮೈಮ್​ ಮೆಟರ್ನಿಟಿ ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಈವತ್ತು ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸಂಜೆ ಅಥವಾ ರಾತ್ರಿ ಯಾವುದೇ ಸಂದರ್ಭದಲ್ಲಿ ಹೆರಿಗೆಯಾಗುವ ಲಕ್ಷಣಗಳಿಗೆ ಎಂದು ವೈದ್ಯರು ತಿಳಿಸಿದ್ದರು.

ಶ್ರೀಕಂಠದತ್ತರ ಬಳಿಕ ಸಂತಾನ ಭಾಗ್ಯದ ಕೊರತೆ ಎದುರಿಸುತ್ತಿದ್ದ ಯದುವಂಶದಲ್ಲಿ ಸಂಭ್ರಮ ಮನೆ ಮಾಡಿದೆ.ತ್ರಿಷಿಕಾ ರವರು ಮುದ್ದಾದ ಪುಟ್ಟ ರಾಜಕುಮಾರನಿಗೆ ಜನ್ಮ ನೀಡಿದ್ದಾರೆ.ಮೈಸೂರಿನ ಅರಮನೆಯಲ್ಲಿ
ಇದೀಗಾ ಸಂಭ್ರಮ ಸಡಗರ ಮನೆ ಮಾಡಿದೆ.

NO COMMENTS

LEAVE A REPLY