ಕ್ಷೇತ್ರ ಪ್ರವಾಸ ಅನುಭವ ಹಂಚಿಕೊಂಡ ಸುನೀಲ್ ಬೋಸ್

ಕ್ಷೇತ್ರ ಪ್ರವಾಸ ಅನುಭವ ಹಂಚಿಕೊಂಡ ಸುನೀಲ್ ಬೋಸ್

478
0
SHARE

ಮೈಸೂರು(ಡಿ,6,2017):ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ ಮಹಾದೇವಪ್ಪನವರ ಪುತ್ರರಾದ ಸುನೀಲ್ ಬೋಸ್ ರವರು ಟಿ.ನರಸಿಪುರ ಕ್ಷೇತ್ರ ಪ್ರವಾಸ ಕೈಗೊಂಡಿದ್ದು ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ತಂದೆಯವರ ಕ್ಷೇತ್ರವಾದ ಟಿ.ನರಸಿಪುರದ ಪ್ರತೀ ಹಳ್ಳಿಗೂ ಬೇಟಿ ನೀಡಿ ಜನರ ಕಷ್ಟಗಳನ್ನು ಆಲಿಸುವಲ್ಲಿ ಸುನೀಲ್ ಬೋಸ್ ಮುಂದಾಗಿದ್ದಾರೆ. ಈ ಮೂಲಕ ಕ್ಷೇತ್ರ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಕ್ಷೇತ್ರ ಸಂಚಾರವು ನೂರಾರು ಅನುಭವಗಳನ್ನು ನೀಡಿದೆ, ಪ್ರತಿ ಹಳ್ಳಿಗೂ ಹೋದಾಗಲು ಒಂದೊಂದು ರೀತಿಯ ಅನುಭವಗಳಾಗಿವೆ ಜನರ ಸಂಕಷ್ಟಗಳನ್ನು ನೋಡಿ ಮನಸ್ಸು ಅತೀವ ಮರುಗಿದೆ. ಒಮ್ಮೆ ಕ್ಷೇತ್ರ ಕೈಗೊಂಡಿದ್ದಾಗ ಅಜ್ಜಿಯೊಬ್ಬರು ದಾರಿಯಲ್ಲೇ ಮಲಗಿದ್ದರು ಅದನ್ನು ಕಂಡು ನನ್ನ ಮನಸ್ಸು ಶೋಕಿಸಿತು, ಅವರನ್ನು ವಿಚಾರಿಸಿದೆ ನನಗೆ ಯಾರು ಇಲ್ಲ ಮಕ್ಕಳೆಲ್ಲಾ ಬಿಟ್ಟುಹೋದರು ಎಂದು ಅಳಲು ತೊಡಿಕೊಂಡರು. ಮರುಕ್ಷಣವೇ ಆಕೆಗೊಂದು ಸೂರನ್ನು ನನ್ನ ಸ್ವಂತ ಖರ್ಚಿನಲ್ಲಿ ಕಲ್ಪಸಿದೆ. ಇಂದು ಅಜ್ಜಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ, ನಾನು ಕಂಡಾಗಲೆಲ್ಲ ಬಾ ಮಗ ಎಂದು ಆತ್ಮೀಯವಾಗಿ ಮಾತನಾಡಿಸುತ್ತಾರೆ. ಆ ಪ್ರೀತಿ, ಕಾಳಜಿ ಕಂಡು ನನಗೆ ಮಾತೆ ಬಾರದಂತಾಗುತ್ತದೆ. ನೊಂದವರ ಕಣ್ಣೀರೊರೆಸಿ ಸಹಾಯ ಮಾಡುವ, ಕಷ್ಟ ಸುಖಗಳನ್ನು ಆಲಿಸುವ ಅವಕಾಶ ಸಿಕ್ಕಿರಿವುದು ನನ್ನ ಭಾಗ್ಯ ಎಂದು ಹೇಳಬಹುದು. ಹೀಗೆ ತಮ್ಮ ಅನುಭವನ್ನು ಮೆಲಕು ಹಾಕಿದರು.

ತಂದೆಯಂತೆ ಪ್ರಜಾಪ್ರತಿನಿಧಿಯಾಗಿ ಪ್ರಜೆಗಳ ಸೇವೆ ಮಾಡಲು ಮುಂದಾಗಿರುವ ಸುನೀಲ್ ಬೋಸ್ ರವರು ಪ್ರಜಾಸೇವಕರಾಗಲು ಮಹತ್ವಾಂಕ್ಷೆಯ ಖಣಜವನ್ನು ತಮ್ಮಲ್ಲಿ ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿಯಾಗಿದ್ದು, ಜನರ ಏಳೀಗೆಗಾಗಿ ಶ್ರಮಿಸುವೆ ಎಂದು ಆಶ್ವಾಸನೆ ನೀಡಿದರು.
-ಶಂಕರ್ ಜಿ.ಬೋಸ್

NO COMMENTS

LEAVE A REPLY