ಅಪ್ರಾಪ್ತ ಬಾಲಕಿಯ ಮೇಲೆ ಶಾಲೆ ಶಿಕ್ಷಕನಿಂದ ಲೈಂಗಿಕ ಕಿರುಕುಳ

ಅಪ್ರಾಪ್ತ ಬಾಲಕಿಯ ಮೇಲೆ ಶಾಲೆ ಶಿಕ್ಷಕನಿಂದ ಲೈಂಗಿಕ ಕಿರುಕುಳ

227
0
SHARE

ಕೋಲ್ಕತ್ತಾ(ಡಿ,6,2017):ಇಲ್ಲಿನ ರಾಣಿಕುತಿ ಎಂಬ ಶಾಲೆಯಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ತನ್ನ ಶಾಲಾ ಶಿಕ್ಷಕರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ನಡೆದಿದೆ.

ಶಾಲೆಯ ಶಿಕ್ಷಕನು 4 ವರ್ಷ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಶೌಚಾಲಯಕ್ಕೆ ಕರೆದೊಯ್ದು ದೈಹಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಸಂಜೆ ಮಗುವು ಮನೆಗೆ ಮರಳಿದಾಗ, ಅವಳ ಶಾಲಾ ಸಮವಸ್ತ್ರದ ಮೇಲೆ ಕಲೆಗಳನ್ನು ಇತ್ತು ಮತ್ತು ಅಸಹ್ಯವಾಗಿ ಅಳುತ್ತಿದ್ದಳು. ಮಗುವಿನ ತಾಯಿ ಬಾಲಕಿಯ ಬಟ್ಟೆಯನ್ನು ಬದಲಾಯಿಸುತ್ತಿದ್ದಾಗ,ಅದನ್ನು ಗಮನಿಸಿ ಹನುಮಾನಗೂಂಡು ತಮ್ಮ ಕುಟುಂಬದ ವೈದ್ಯರ ಬಳಿ ಪರೀಕ್ಷಿಸಿದ್ದಾರೆ, ಇದು ದೈಹಿಕವಾಗಿ ದುರುಪಯೋಗವೆಂದು ದೃಢಪಡಿಸಿದ ಮೇಲೆ ಪೋಷಕರು ಪ್ರಕರಣವನ್ನು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದರು.

ಈ ಕುರಿತು ಭಯಾನಕ ಘಟನೆಯನ್ನು ಹುಡುಗಿ ತನ್ನ ತಂದೆತಾಯಿಗಳಿಗೆ ವಿವರಿಸಿದ್ದಾಳೆ. ಶಾಲೆಯ ಶಿಕ್ಷಕರ ಚಿತ್ರಗಳನ್ನು ಫೋನ್ನಲ್ಲಿ ತೋರಿಸಿದಾಗ, ಪಿಟಿ ಶಿಕ್ಷಕನನ್ನು ಗುರುತಿಸಿ ಇತನೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದು ಎಂದು ಸ್ವಷ್ಟಿಸಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನು ನಡೆಸಿದ ದೈಹಿಕ ದುರುಪಯೋಗದ ಬಗ್ಗೆ ಎಫ್ಐಆರ್ ದಾಖಲಿಸಿದ್ದಾರೆ. ಮಗುವು ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ದಾಖಲಾಗಿದೆ.

NO COMMENTS

LEAVE A REPLY