ಪತ್ರಕರ್ತ ಅಂಶಿ ಪ್ರಸನ್ನ ರವರ ಪುಸ್ತಕವು ಡಿ.8 ಕ್ಕೆ ಸಿಎಂ ಅಮೃತಾಸ್ತದಿಂದ ಬಿಡುಗಡೆ

ಪತ್ರಕರ್ತ ಅಂಶಿ ಪ್ರಸನ್ನ ರವರ ಪುಸ್ತಕವು ಡಿ.8 ಕ್ಕೆ ಸಿಎಂ ಅಮೃತಾಸ್ತದಿಂದ ಬಿಡುಗಡೆ

205
0
SHARE

ಮೈಸೂರು(ಡಿ,5,2017):ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರ ಮೈಸೂರು ಹಾಗೂ ಚಾಮರಾಜನಗರ ರಾಜಕೀಯ ಇತಿಹಾಸ ಪುಸ್ತಕ ಡಿಸೆಂಬರ್ 8ಕ್ಕೆ ಬಿಡುಗಡೆಯಾಗಲಿದೆ.

ವಿಷೇಶವಾಗಿ ಪುಸ್ತಕದಲ್ಲಿ ಚಾಮರಾಜನಗರ ಹಾಗೂ ಮೈಸೂರಿನ ಐವತ್ತು ವರ್ಷಗಳ ರಾಜಕೀಯ ಇತಿಹಾಸ ಹಾಗೂ ಮಾಹಿತಿ ಹೊಂದಿರುವ ಅಪರೂಪದ ಪುಸ್ತಕವಾಗಿದ್ದು,ಸುಮಾರು ಏಳನೂರುಕ್ಕು ಹೆಚ್ಚು ಪುಟಗಳನ್ನು ಹೊಂದಿದೆ. ಇದನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರು ರಚಿಸಿದ್ದಾರೆ. ಈ ಪುಸ್ತಕವನ್ನು ಡಿಸೆಂಬರ್ 8 ರಂದು ಸಿಎಂ ಸಿದ್ದರಾಮಯ್ಯನವರು ತಮ್ಮ ಅಮೃತಾಸ್ತದಿಂದ ಬಿಡುಗಡೆ ಮಾಡಲಿದ್ದಾರೆ.

ಈ ಪುಸ್ತಕ ದೇಶದ ಮೊದಲ ಪ್ರಜಾಪ್ರತಿನಿಧಿ ಸಭೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದು ಭಾಷಣ ಮಾಡಿದವರೆಗಿನ ಅಪರೂಪದ ಕುತೂಹಲಕಾರಿ ರಾಜಕೀಯ ವಿಶ್ಲೇಷಣೆ ಹೊಂದಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅಂಕಣಕಾರ ಚಿನ್ನಸ್ವಾಮಿ ವಡ್ಡಗೆರೆ ಅವರು ಮಾಹಿತಿ ನೀಡಿದರು.

NO COMMENTS

LEAVE A REPLY