ಜಿಲ್ಲಾಡಳಿತ ಬಹಿರಂಗ ಚರ್ಚೆಗೆ ಬರಲಿ: ಪ್ರತಾಪ್ ಸಿಂಹ ಕರೆ

ಜಿಲ್ಲಾಡಳಿತ ಬಹಿರಂಗ ಚರ್ಚೆಗೆ ಬರಲಿ: ಪ್ರತಾಪ್ ಸಿಂಹ ಕರೆ

192
0
SHARE

ಮೈಸೂರು(ಡಿ,4,2017):ಕಳೆದ ದಿನದಂದು ಹುಣಸೂರಿನಲ್ಲಿನ ಹನುಮ ಜಯಂತಿ ಗಲಾಟೆ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದಕ್ಷಿಣ ವಲಯ ಐಜಿಪಿ ಅವರ ವಿರುದ್ಧ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

ಈ ಕುರಿತು ಬಹಿರಂಗ ಚರ್ಚೆಗೆ ಕರೆದಿರುವ ಸಂಸದ ಪ್ರತಾಪ್ ಸಿಂಹ, ನಿನ್ನೆ ಏನಾಯಿತು, ತಪ್ಪು ಮಾಡಿದವರು ನಾವಾ ಅಥವಾ ನೀವಾ ಎಂಬುದು ಸಾರ್ವಜನಿಕವಾಗಿ ಚರ್ಚೆಯಾಗಲಿ. ನಮ್ಮ ಹಕ್ಕು ಕಸಿದುಕೊಳ್ಳಲು ಪೊಲೀಸರು ಪ್ರಯತ್ನಿದರು. ಹನುಮ ಜಯಂತಿ ಮೆರವಣಿಗೆ ಅನುಮತಿ ನಿರಾಕರಣೆ ಕೇವಲ ಅಧಿಕಾರಿಗಳ ನಿರ್ಧಾರವಲ್ಲ. ಇದರ ಹಿಂದೆ ರಾಜ್ಯ ಸರ್ಕಾರದ ಕೈವಾಡ ಇದೆ ಎಂದು ಆರೋಪಿಸಿದರು.

ಹನುಮ ಜಯಂತಿ ಮಾಡಿಯೇ ಮಾಡುತ್ತೇವೆ. ನಮ್ಮ ಧಾರ್ಮಿಕ ಹಕ್ಕು ಕಸಿದುಕೊಳ್ಳಲು ಯಾರಿಗೂ ಅಧಿಕಾರ ಇಲ್ಲ. ನಾನು ಯಾವ ಪೊಲೀಸರ ಕರ್ತವ್ಯಕ್ಕೂ ಅಡ್ಡಿ ಮಾಡಿಲ್ಲ. ಬಿಳಿಕೆರೆ ಬಳಿ ಸಾರ್ವಜನಿಕರನ್ನೂ ಅನುಮಾನದಿಂದ ತಪಾಸಣೆ ಮಾಡಲಾಗುತ್ತಿತ್ತು. ಅದನ್ನು ಪ್ರಶ್ನಿಸಿ ನಾನೇ ಡ್ರೈವ್ ಮಾಡಿಕೊಂಡು ಹುಣಸೂರಿಗೆ ಹೊರಟೆ. ನನ್ನ ಕಾರಿಗೆ ಬ್ಯಾರಿಕೇಡ್ ಸಿಕ್ಕಿಕೊಂಡು ಎಳೆದುಕೊಂಡು ಹೋಯಿತು. ಅದನ್ನೇ ಪೊಲೀಸರು ದೊಡ್ಡದು ಮಾಡಿ ಕೇಸ್ ಹಾಕಿದ್ದಾರೆ ಎಂದರು.

NO COMMENTS

LEAVE A REPLY